ಬೈಕ್ ನ ಹಿಂಬದಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗಲು ಹೊಸ ರೂಲ್ಸ್!

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್‌ಟಿಎಚ್), ಸಣ್ಣ ಮಕ್ಕಳನ್ನು ದ್ವಿಚಕ್ರ ವಾಹನದ​ ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಹೊಸ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. 

ಪ್ರಸ್ತಾವಿತ ನಿಯಮಗಳ ಪ್ರಕಾರ, 4 ವರ್ಷದೊಳಗಿನ ಮಕ್ಕಳನ್ನು ಮೋಟಾರ್​ ಸೈಕಲ್​​ನ ಹಿಂಬದಿಯಲ್ಲಿ ಕೂರಿಸಿಕೊಂಡು ಹೋಗುವಾಗ ವೇಗವು ಗಂಟೆಗೆ 40 ಕಿ.ಮೀಗಿಂತ ಹೆಚ್ಚಿರಬಾರದು. ಅಲ್ಲದೇ 9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ಕೂರಿಸಿಕೊಂಡು ಹೋಗುವುದಾದರೆ ಕ್ರ್ಯಾಶ್ ಹೆಲ್ಮೆಟ್ ಧರಿಸಬೇಕು ಎಂದಿದೆ.

ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯ ಪ್ರಕಾರ, 4 ವರ್ಷದೊಳಗಿನ ಮಗುವನ್ನು ಮೋಟಾರ್‌ ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗುವಾಗ ವೇಗವು 40 ಕಿ.ಮೀಗಿಂತ ಹೆಚ್ಚಿರಬಾರದು.

ಮೋಟಾರ್ ಸೈಕಲ್‌ ಹಿಂಬದಿಯಲ್ಲಿ ಕುಳಿತ ಮಗುವನ್ನು ಸವಾರನೊಂದಿಗೆ ಕೂಡಿಸುವಂತಹ ಸುರಕ್ಷತಾ ಪಟ್ಟಿಯನ್ನು ಒದಗಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಟ್ವೀಟ್​ ಮಾಡಿದ್ದಾರೆ. ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಮತ್ತು ಸಲಹೆ ಇದ್ದಲ್ಲಿ, ಅದನ್ನು ನೀಡುವಂತೆ ಎಂಒಆರ್‌ಟಿಎಚ್ ಕೇಳಿದೆ

Leave a Reply

Your email address will not be published. Required fields are marked *

error: Content is protected !!