ಉಡುಪಿ ಮಮ್ಮಿ ಡಿಜಿಟಲ್ ಸ್ಟುಡಿಯೋ: ಮಕ್ಕಳ ಫೋಟೋ ಸ್ಪರ್ಧೆ- 2021

ಉಡುಪಿ ಅ.25 (ಉಡುಪಿ ಟೈಮ್ಸ್ ವರದಿ): ಉದ್ಯಾವರದ ಮಮ್ಮಿ ಡಿಜಿಟಲ್ ಸ್ಟುಡಿಯೋ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ ಸಹಕಾರದೊಂದಿಗೆ ಮಕ್ಕಳ ಫೋಟೋ ಸ್ಪರ್ಧೆ 2021 ನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಯಲಿದ್ದು 2 ವಿಭಾಗಗಳಲ್ಲೂ ಪ್ರತ್ಯೇಕ ಬಹುಮಾನ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಉಡುಪಿ, ದ.ಕ. ಜಿಲ್ಲೆಯ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ 0-2 ವರ್ಷ ಮತ್ತು 2-5 ವರ್ಷಗಳ ಮಕ್ಕಳ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಈ ಎರಡು ವಿಭಾಗದ ವಯಸ್ಸಿನ ಮಕ್ಕಳ ಕಲರ್ ಫೋಟೋಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಮಕ್ಕಳ ಸಹಜ ಆಕರ್ಷಕ ಭಂಗಿಯ ಕಲರ್ ಫೋಟೋಗಳನ್ನು ಕಳುಹಿಸ ಬಹುದಾಗಿದ್ದು, 1 ಮಗುವಿನ ವಿವಿಧ ಭಂಗಿಯ 2 ಫೋಟೋಗಳನ್ನು ಸ್ಪರ್ಧೆಗೆ ಕಳುಹಿಸಲು ಅವಕಾಶವಿದೆ.

ಸ್ಪರ್ಧೆಯಲ್ಲಿ 6×9 ಅಳತೆಯ ಫೋಟೋಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು. ಫೋಟೋಗಳ ಹಿಂಬದಿಯಲ್ಲಿ ಸ್ಪರ್ಧೆಯ ವಿಭಾಗ, ಮಗುವಿನ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ ಇರುವುದಿಲ್ಲ. ಮಕ್ಕಳ ಫೋಟೋಗಳು ನ. 12 ರ ಒಳಗೆ ತಿಳಿಸಲಾದ ವಿಳಾಸಕ್ಕೆ ಕಳುಹಿಸಬೇಕು. ಪೋಸ್ಟ್ ನಲ್ಲಿ ಬಂದ ಫೋಟೋಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಇತರ ಯಾವುದೇ ರೀತಿಯಿಂದ ಬಂದ ಫೋಟೋಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಫೋಟೋಗಳನ್ನು ಯಾವುದೇ ಕಾರಣಕ್ಕೂ ಮರಳಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಸ್ಪರ್ಧೆಯ ಕುರಿತು ಯಾವುದೇ ರೀತಿಯ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆಗೆ 3 ಆಕರ್ಷಕ ಸಮಾಧಾನಕರ ಬಹುಮಾನ ಕೂಡಾ ನೀಡಲಾಗುವುದು. ಸ್ಪರ್ಧೆಗೆ ಮಕ್ಕಳ ಫೋಟೋ ಕಳುಹಿಸುವವರು ಮಮ್ಮಿ ಡಿಜಿಟಲ್ ಸ್ಟುಡಿಯೋ,ಶೇಶಾನಂದ ಕಾಂಪ್ಲೆಕ್ಸ್ ,ಕೊರಂಗ್ರಪಾಡಿ ಉಡುಪಿ 574118 ಇಲ್ಲಿಗೆ ಕಳುಹಿಸಬೇಕಾಗಿದೆ.

ಈ ವಿಜೇತರ ಹೆಸರು ಮತ್ತು ಚಿತ್ರವನ್ನು ಮಾಧ್ಯಮ ಪ್ರಾಯೋಜಕರಾದ ಉಡುಪಿ ಟೈಮ್ಸ್ ಹಾಗೂ ಇತರ ಸೋಷಿಯಲ್ ಮಾಧ್ಯಮಗಳಲ್ಲಿ ನ.14 ರಂದು ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9743283089 ಅಥವಾ 9342709799 ಅನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!