ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವುದು ಸರಿಯಲ್ಲ-ಈಶ್ವರಪ್ಪ

ಶಿವಮೊಗ್ಗ, ಅ.23: ನಾವು ಸಂಘಟನೆ, ಸಾಧನೆ, ನಾಯಕತ್ವದ ಆಧಾರದ ಮೇಲೆ‌ ಚುನಾವಣೆ ನಡೆಸುತ್ತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ನಾಯಕತ್ವವೂ ಇಲ್ಲ, ಸಂಘಟನೆಯೂ ಇಲ್ಲ, ಸಾಧನೆಯೂ ಇಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವುದು ಸರಿಯಲ್ಲ. ಹಾನಗಲ್ ಹಾಗೂ ಸಿಂಧಗಿ ಎರಡು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಬೇಕಿದ್ದರೆ ಅವರ ಸರ್ಕಾರದ ಅವಧಿಯಲ್ಲಿ‌ ಮಾಡಿದ ಸಾಧನೆಗಳನ್ನು ಜನರ ಮುಂದಿಟ್ಟು ಚುನಾವಣೆ ನಡೆಸಲಿ” ಎಂದರು.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ಸೋನಿಯಾ ಇಲ್ಲವೇ ರಾಹುಲ್ ಗಾಂಧಿ ಹೆಸರು ಹೇಳುತ್ತಾರೆಯೇ ಡಿ.ಕೆ. ಶಿವಕುಮಾರ್ ಹೆಸರು ಹೇಳಿದರೆ ಸಿದ್ದರಾಮಯ್ಯ ಅವರಿಗೆ ಆಗುವುದಿಲ್ಲ. ಸಿದ್ದರಾಮಯ್ಯ ಹೆಸರು ಹೇಳಿದರೆ ಡಿ.ಕೆ.ಶಿವಕುಮಾರ್ ಗೆ ಆಗುವುದಿಲ್ಲ. ಅವರದ್ದೇ ಒಡೆದ ಪಕ್ಷವಾಗಿದೆ” ಎಂದಿದ್ದಾರೆ.

ಕೊರೊನಾ ಲಸಿಕಾ ಅಭಿಯಾನದ ವಿಷಯದಲ್ಲಿ‌ ಮುಂದುವರಿದ ದೇಶಗಳೇ ಭಾರತ ಹಾಗೂ ನರೇಂದ್ರ‌ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಕೊರೊನಾ ಲಸಿಕೆ ಸಾಧನೆ ನನ್ನಿಂದಲೇ ಆಗಿದ್ದು ಎಂದು ನರೇಂದ್ರ ಮೋದಿಯವರು ಎಲ್ಲಿಯೂ ಹೇಳಲಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!