ನಿಟ್ಟೆ: ಮಹಾವಿದ್ಯಾಲಯದ ಪ್ರಾಧ್ಯಾಪಕರ ಆವಿಷ್ಕಾರಕ್ಕೆ ಪೇಟೆಂಟ್
ನಿಟ್ಟೆ ಅ.20: ಇಲ್ಲಿನ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರ ಆವಿಷ್ಕಾರಕ್ಕೆ ಭಾರತ ಸರಕಾರದ ಪೇಟೆಂಟಿಂಗ್ ವಿಭಾಗವು 20 ವರ್ಷಗಳಿಗೆ ಪೇಟೆಂಟ್ ಹಕ್ಕನ್ನು ನೀಡಿದೆ.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಲೂಣ್ಕರ್ ವರು ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದು, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಉಪಪ್ರಾಂಶುಪಾಲ ಡಾ. ಐ. ರಮೇಶ್ ಮಿತ್ತಂತಾಯ ಮತ್ತು ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶ್ರೀರಾಮ್ ಮರಾಠೆ ಅವರ ‘ಸಸ್ಟೈನೇಬಲ್ ಪರ್ವಿಯಸ್ ಆಲ್ಕಲಿ ಆ್ಯಕ್ಟಿವೇಟೆಡ್ ಕಾಂಕ್ರೀಟ್ ಪೇವರ್ ಬ್ಲಾಕ್ ಪೇವ್ಮೆಂಟ್ ಫಾರ್ ಗ್ರೌಂಡ್ ವಾಟರ್ ರೀಚಾರ್ಜ್’ ಎಂಬ ಆವಿಷ್ಕಾರಕ್ಕೆ ಭಾರತ ಸರಕಾರದ ಪೇಟೆಂಟಿಂಗ್ ವಿಭಾಗವು 1970 ರ ಪೇಟೆಂಟ್ ಆ್ಯಕ್ಟ್ ನ ಅನುಸಾರ 20 ವರ್ಷಗಳಿಗೆ ಪೇಟೆಂಟ್ ಹಕ್ಕನ್ನು ನೀಡಿದೆ ಎಂದು ತಿಳಿಸಿದ್ದಾರೆ.