ಮರ್ಣೆ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಟೆಂಪೋ ಚಾಲಕ- ದೂರು ದಾಖಲು

ಮಣಿಪಾಲ ಅ.20(ಉಡುಪಿ ಟೈಮ್ಸ್ ವರದಿ): ಮಹಿಳೆಯೊಂದಿಗೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿರುವ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಮರ್ಣೆ ಗ್ರಾಮದ ರೂಪಾ ಶ್ಯಾಮ ಶೆಟ್ಟಿ ಅವರು ಉಮೇಶ್ ನಾಯಕ್ ವಿರುದ್ಧ ಪೊಲೀಸರಿಗೆ ದೂರುನೀಡಿದ್ದಾರೆ. ಅದರಂತೆ ರೂಪಾ ಶ್ಯಾಮ ಶೆಟ್ಟಿ ಅವರು ಅ.18 ರಂದು ಸಂಜೆ ವೇಳೆ ಕೆಲಸ ಮುಗಿಸಿಕೊಂಡು ಹಿರೇಬೆಟ್ಟು ದಾರಿಯಾಗಿ ಮರ್ಣೆ ಗ್ರಾಮದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿರೇಬೆಟ್ಟು-ಮರ್ಣೆಯ ಅಣೆಕಟ್ಟಿನ ಬಳಿ ಟೆಂಪೋ ಚಾಲಕ ಉಮೇಶ್ ನಾಯಕ್ ಎಂಬಾತ ಬಂದು ನಿನ್ನ ಬಳಿ ಮಾತನಾಡಬೇಕು ಸ್ವಲ್ಪ ನಿಲ್ಲು ಎಂದು ಹೇಳಿದ್ದಾನೆ. ಆಗ ರೂಪಾ ಅವರು ಭಯದಿಂದ ಮುಂದೆ ಹೋಗಿದ್ದು ಆಗ ಆತನು ಹಿಂಬಾಲಿಸಿಕೊಂಡು ಬಂದು ರೂಪಾರವರನ್ನು ಅಡ್ಡಗಟ್ಟಿ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿರುವುದಾಗ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!