| ಕಾರ್ಕಳ ಅ.19 (ಉಡುಪಿ ಟೈಮ್ಸ್ ವರದಿ): ಬೈಲೂರಿನ ಹೊಸಬೆಳಕು ಆಶ್ರಮದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಅ.17 ರಂದು ನಡೆಯಿತು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶ್ರಮದ ನೂತನ ಕಟ್ಟಡದ ಶಿಲಾನ್ಯಾಸಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸರಕಾರ ಮಾಡುವ ಕೆಲಸವನ್ನು ಹೊಸಬೆಳಕು ಸಂಸ್ಥೆ ಮಾಡುತ್ತಿರುವುದು ಉಡುಪಿಗೆ ಶ್ಲಾಘನೀಯ ಎಂದರು. ಶಿಲನ್ಯಾಸ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಹೊಸಬೆಳಕು ಸಂಸ್ಥೆಗೆ ಧನಸಹಾಯ ಮಾಡಿದರು.
ಈ ವೇಳೆ ಬೈಲೂರಿನ ಮೊಹಿದ್ದೀನ್ ಜುಮ್ಮಾ ಮಸೀದಿಯ ಮೌಲಾನ ಅಬ್ದುಲ್ ರಜಾಕ್ ಅವರು ಮಾತನಾಡಿ, ಎಲ್ಲಾ ಧರ್ಮದಲ್ಲೂ ಮೊದಲು ಸೇವೆ ಮಾಡಬೇಕು ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಆಶ್ರಮದ ನೂತನ ಕಟ್ಟಡಕ್ಕೆ 10 ಚೀಲ ಸಿಮೆಂಟ್ ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ದಂಡಿಬಾಗಿಲುವಿನ ಸಿಯೋನ್ ಆಶ್ರಮದ ಯು.ಸಿ.ಪೌಲುನ್ ಅವರು ತಮ್ಮ ಅನುಭವದ ಮಾತುಗಳನ್ನಾಡಿ, ನಾನು ಇಂದು ಭಾನುವಾರದಂದು ಚರ್ಚ್ ಹೋಗಿ ಪಾರ್ಥನೆ ಮಾಡಿದ್ದರೆ ಆಗುವ ಖುಷಿಗಿಂತ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಹೆಚ್ಚಿನ ಖುಷಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ, ವಿನಯಚಂದ್ರ ಸಾಸ್ತಾನ, ನಾಗರತ್ನ ಹೇರ್ಳೆ, ವಿನಯಚಂದ್ರ ಸಾಸ್ತಾನ ಹಾಗೂ ಬೈಲೂರು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
| |