ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ಅಡಿ: ರಾಜ್ಯದಿಂದ ಇನ್ನೂ 5 ವರ್ಷ ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಅಡಿಯಲ್ಲಿ ಸೇರಿಸದಂತೆ ಹಾಗೂ ಜಿಎಸ್‌ಟಿ ಪರಿಹಾರವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವಂತೆ ರಾಜ್ಯ ಜಿಎಸ್’ಟಿ ತಂಡವು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಮನವಿ ಮಾಡಿಕೊಂಡಿದೆ. 

ಪ್ರತೀ ಬಾರಿಯ ಸಭೆಯು ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸುತ್ತಿದ್ದರು. ಆದರೆ, ಈ ಬಾರಿ ವಾಣಿಜ್ಯ ತೆರಿಗೆಗಳ ಆಯುಕ್ತರಾದ ಸಿ ಶಿಖಾ, ರವಿ ಪ್ರಸಾದ್ ಅವರು ವಹಿಸಿರುವುದು ಕಂಡು ಬಂದಿತ್ತು.ಸಭೆಯಲ್ಲಿ ವಾಣಿಜ್ಯ ತೆರಿಗೆ ಹೆಯ್ಯುವತಿ ಆಯುಕ್ತರಾದ ರವಿ ಪ್ರಸಾದ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಅಡಿಯಲ್ಲಿ ಸೇರಿಸಬಾರದೆಂಬ ರಾಜ್ಯ ಸರ್ಕಾರದ ಸಲಹೆಯನ್ನು ಹೆಚ್ಚಿನ ರಾಜ್ಯಗಳು ಬೆಂಬಲಿಸಿದವು. 

ಇದೇ ವೇಳೆ ಕೋವಿಡ್ ಮತ್ತು ಇತರ ಕಾರಣಗಳಿಂದಾಗಿ ಆದಾಯವನ್ನು ಸಂಗ್ರಹಣೆ ಸವಾಲಾಗಿ ಪರಿಣಮಿಸಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್’ಟಿ ಪರಿಹಾರವನ್ನು ಇನ್ನೂ 5ವರ್ಷಗಳ ಕಾಲ ವಿಸ್ತರಿಸುವಂತೆಯೂ ರಾಜ್ಯಗಳು ಮನವಿ ಮಾಡಿದವು. ಆದರೆ ಇದಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಆಗ್ರಹಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ. ಆದರೆ, ಈ ಕುರಿತು ಪರಿಶೀಲನೆ ನಡೆಸಲು 2 ಸಮಿತಿಗಳನ್ನು ರಚನೆ ಮಾಡುವುದಾಗಿ ತಿಳಿಸಿದ್ದಾರೆಂದು ವರದಿಗಳು ತಿಳಿವೆ. 2 ಸಮಿತಿಗಳ ಪೈಕಿ ಒಂದು ಸಮಿತಿಯು ತೆರಿಗೆ ಪುನರ್ರಚನೆಯನ್ನು ಅಧ್ಯಯನ ನಡೆಸಲಿದ್ದು, ಮತ್ತೊಂದು ಸಮಿತಿಯು ಉತ್ತಮ ಜಾರಿಗಾಗಿ ಐಟಿ ವ್ಯವಸ್ಥೆ ಯನ್ನು ವಿಶ್ಲೇಷಣೆ ನಡೆಸಲಿದೆ ಎಂದು ತಿಳಿದುಬಂದಿದೆ. 

ಕರ್ನಾಟಕಕ್ಕೆ ಕೇಂದ್ರದ ಪರಿಹಾರವು ಜೂನ್ 2022 ರಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೆಲದ ದಿನಗಳ ಹಿಂದಷ್ಟೇ ಬೊಮ್ಮಾಯಿಯವರು ಎರಡು ಪತ್ರಗಳನ್ನು ಬರೆದು, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಅಡಿಯಲ್ಲಿ ಸೇರಿಸದಂತೆ ಹಾಗೂ ಜಿಎಸ್‌ಟಿ ಪರಿಹಾರವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರು. ನಿನ್ನೆಯಷ್ಟೇ ಕಲಬುರಗಿಯಲ್ಲಿ ಮಾತನಾಡಿದ್ದ ಬೊಮ್ಮಾಯಿಯವರು, ಪೆಟ್ರೋಲ್, ಡೀಸಲ್ ಜಿಎಸ್ಟಿ ವ್ಯಾಪ್ತಿಗೆ ತರುವ ಬಗ್ಗೆ ಇಂದು ವಿತ್ತ ಸಚಿವರ ನೇತೃತ್ವದಲ್ಲಿ ಚರ್ಚೆ ಆಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರದ ಬಹಳಷ್ಟು ವಿಚಾರ ಇದರಲ್ಲಿರಲಿವೆ. ಇದರಿಂದ ದೂರಗಾಮಿ ಪರಿಣಾಮಗಳೆನಾಗುತ್ತವೆ ಎನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದರು.

ಕರ್ನಾಟಕವು ಪೆಟ್ರೋಲ್ ಮತ್ತು ಡೀಸೆಲ್‌ನಿಂದ ವರ್ಷಕ್ಕೆ ಸುಮಾರು 20,000 ಕೋಟಿ ರೂಪಾಯಿಗಳನ್ನು ಗಳಿಸುತ್ತದೆ, ಕೇಂದ್ರದ ಪರಿಹಾರವನ್ನು ವರ್ಷಕ್ಕೆ 12,000-13,000 ಕೋಟಿಗಳಿಗೆ ನಿಗದಿಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!