ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ಬಿ. ನಾಗರಾಜ್, ಪ್ರ.ಕಾ.ರೆನೋಲ್ಡ್ ಪ್ರವೀಣ್ ಆಯ್ಕೆ

ಉಡುಪಿ ಸೆ.17(ಉಡುಪಿ ಟೈಮ್ಸ್ ವರದಿ): ಉಡುಪಿ ವಕೀಲರ ಸಂಘದ ಮುಂದಿನ 2 ವರ್ಷದ ಅವಧಿಗೆ ಅಧ್ಯಕ್ಷರಾಗಿ ಬಿ. ನಾಗರಾಜ್ ಅವರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಇಂದು ಚುನಾವಣಾಧಿಕಾರಿ ಶಶೀಂದ್ರ ಕುಮಾರ್‌ ಅವರು ಘೋಷಿಸಿದ್ದು, ಉಪಾಧ್ಯಕ್ಷರಾಗಿ ದಿನೇಶ್‌ ಬಿ. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಘವೇಂದ್ರ ಹೆಗ್ಡೆ, ಶಿವಾನಂದ ಅಮೀನ್, ಹೆಚ್. ಗುರುರಾಜ್ ಶೆಟ್ಟಿ, ಅಶ್ವಿತ ಅಮೀನ್, ಪೂರ್ಣಿಮಾ, ಸ್ವರ್ಣಲತಾ ಮತ್ತು ಅಮೃತಕಲಾ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ನಾಗರಾಜ್ ಅವರು ಈ ಹಿಂದಿನ ಸಾಲಿನಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ರೆನೋಲ್ಡ್ ಪ್ರವೀಣ್ ಕುಮಾರ್ ಇವರು ಕಳೆದ 4 ಅವಧಿಗಳಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ಇನ್ನು ಸಂಘದ ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಸಮಿತಿಯ 13 ಸದಸ್ಯ ಸ್ಥಾನಗಳಿಗೆ ಸೆ. 24 ರಂದು ಚುನಾವಣೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!