ಇಲ್ಲ್ ಒಕ್ಕೆಲ್ ಚಿತ್ರದ ಟೀಸರ್ ಬಿಡುಗಡೆ

ಮಂಗಳೂರು : ಡಾ. ಸುರೇಶ್ ಚಿತ್ರಾಪು ನಿರ್ದೇಶನದ ಬಹು ನಿರೀಕ್ಷಿತ ಇಲ್ಲ್ ಒಕ್ಕೆಲ್ ಚಲನಚಿತ್ರ ಬಿಡುಗಡೆಯ ತಯಾರಿಯಲ್ಲಿದೆ. ಚಿತ್ರದ ಟೀಸರ್ ಸೆಪ್ಟೆಂಬರ್ ಮೂರನೆಯ ವಾರದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಇಲ್ಲ್ ಒಕ್ಕೆಲ್ ಎಂಬುದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು ಕೋಸ್ಟಲ್ ವುಡ್‌ನ ಹಾಶ್ಯ ರತ್ನಗಳಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,  ಭೋಜರಾಜ ವಾಮಂಜೂರು, ಕಾಂಟ್ರಾಕ್ಟರ್, ಪೈಂಟರ್, ಮೇಸ್ತ್ರೀ ಪಾತ್ರದಲ್ಲಿ ಇಲ್ಲ್ ಒಕ್ಕೆಲ್‌ನ ಮನೆ ಕಟ್ಟಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಸ್ಯಾಂಡಲ್ ವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿರುವ ಅದ್ವಿತಿ ಶೆಟ್ಟಿ ಮೊದಲ ಬಾರಿಗೆ ತನ್ನ ಮಾತೈ ಭಾಷೆಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ತುಳು ನಾಡಿನ ದಿಗ್ವಿಜ ಕಲಾವಿದರ ದಂಡೇ ಇದೆ. ಮುಖ್ಯವಾಗಿ ವಿಸ್ಮಯ ವಿನಾಯಕ್, ವಿ.ಜೆ ವಿನೀತ್,ಉಮೇಶ ಮಿಜಾರು, ಸುನಿಲ್ ನೆಲ್ಲಿಗುಡ್ಡೆ, ಮೈಂರಾಮದಾಸ್, ರಾಜೇಶ್ ಪೂಜಾರಿ, ರಾದೇಶ್, ಪಿಲಿಬೈಲ್ ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ, ತುಳುನಾಡ ಐಸಿರಿ ರೂಪ ವರ್ಕಾಡಿ ಹಾಗೂ ನಿರೀಕ್ಷ ಶೆಟ್ಟಿ ಪುತ್ತೂರು ವಿಶಿಷ್ಟ ಪಾತ್ರದಲ್ಲಿ ಮಿಂಚಲಿದ್ದಾರೆ. ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕಟೀಲ್ ಇಲ್ಲ್ ಒಕ್ಕೆಲ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಖ್ಯಾತ ಗಾಯಕರಾದ ರಘು ದೀಕ್ಷಿತ್, ಟಿಪ್ಪು, ಮೈಂ ರಾಮದಾಸ್ ಹಾಡಿರುವ ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಚಿತ್ರವನ್ನು ಡಿಸೆಂಬರ್ ತಿಂಗಳಲ್ಲಿ ಕರಾವಳಿ ಜಿಲ್ಲೆ, ಬೆಂಗಳೂರು ಹಾಗೂ ವಿದೇಶದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕಾರ ವಾಸುದೇವ ಚಿತ್ರಾಪು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!