ಟೋಕಿಯೊ ಒಲಂಪಿಕ್ಸ್: ಭಾರತಕ್ಕೆ ಮತ್ತೊಂದು ಪದಕ

ಟೋಕಿಯೊ ಆ.6: ಈ ಬಾರಿಯ ಒಲಂಪಿಕ್ಸ್ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಲಭಿಸಿದೆ. 65 ಕೆ.ಜಿ ಕುಸ್ತಿ ವಿಭಾಗದಲ್ಲಿ ನಿರೀಕ್ಷೆಯಂತೆ ಬಜರಂಗ್ ಪುನಿಯಾ ಕಂಚು ಗೆದ್ದಿದ್ದಾರೆ. 65 ಕೆ.ಜಿ ಕುಸ್ತಿ ವಿಭಾಗದಲ್ಲಿ ಕಂಚಿಗಾಗಿ ಬಜರಂಗ್ ಪುನಿಯಾ ಹಾಗೂ ಕಜಕಿಸ್ತಾನದ ಡಿ. ನಿಯಾಜ್ಬೆಕೋವ್ ಮುಖಾಮುಖಿಯಾಗಿದ್ದರು.

ಅಂತಿಮ ಸುತ್ತಿನಲ್ಲಿ 8-0 ಅಂಕಗಳಿಂದ ಬಜರಂಗ್ ಅವರು ಕಜಕಿಸ್ತಾನದ ಡಿ. ನಿಯಾಜ್ಬೆಕೋವ್ ರನ್ನು ಸೋಲಿಸಿ ಕಂಚು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಅವಧಿಯಲ್ಲಿ ಭಜರಂಗ್ 2-0 ಮುನ್ನಡೆಯಲ್ಲಿದ್ದರು. ಎರಡನೇ ಅವಧಿಯಲ್ಲಿ, ಪೂನಿಯಾ ಇನ್ನೂ 4 ಅಂಕಗಳನ್ನು ಅದ್ಭುತ ರೀತಿಯಲ್ಲಿ ಪಡೆದರು. ಬಳಿಕ  ಕೊನೆಯಲ್ಲಿ 8-0 ಅಂಕದಿಂದ ಗೆಲುವು ಸಾಧಿಸಿದರು.

Leave a Reply

Your email address will not be published. Required fields are marked *

error: Content is protected !!