ಭಾರತೀಯ ಮಹಿಳಾ ಹಾಕಿ ತಂಡ ನಿಜವಾಗಲೂ ಸೋಲಲಿಲ್ಲ… ಖಂಡಿತವಾಗಿಯೂ ಇದೊಂದು ಗೆಲುವು…
ಆಟದಲ್ಲಿ ಸೋಲು-ಗೆಲುವು ಸರ್ವೇಸಾಮಾನ್ಯ ಆದರೆ ಭಾಗವಹಿಸುವುದು ಬಹಳ ಮುಖ್ಯ…
ಯಾರೂ ನಿರೀಕ್ಷೆ ಮಾಡದಂತಹ ಒಂದು ತಂಡ ಸೆಮಿಫೈನಲ್ ವರೆಗೆ ತಲುಪಿದ್ದು ಒಂದು ದೊಡ್ಡ ಸಾಧನೆ ಮಾತ್ರವಲ್ಲ ಇದೊಂದು ಭಾರತದ ಮಹಿಳಾ ಹಾಕಿಗೆ ಸಿಕ್ಕಂತಹ ಮಹತ್ತರವಾದ ಗೆಲುವು..
ಬಹಳ ವರ್ಷಗಳ ಹಿಂದೆ ಮಹಿಳೆಯರು ಕ್ರೀಡಾ ಕ್ಷೇತ್ರಕ್ಕೆ ಬರುವುದೇ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಅನೇಕ ಮಹಿಳಾ ಆಟಗಾರ್ತಿಯರ ಕನಸುಗಳು ಕಮರಿ ಹೋದದ್ದು ಬಹಳಷ್ಟಿದೆ. ಆದರೆ ಯಾವಾಗಿನಿಂದ ಸೈನಾ ನೆಹ್ವಾಲ್, ಸಾನಿಯಾ ಮಿರ್ಜಾ ರಂತಹ ಮಿಂಚಲು ಆರಂಭಿಸಿದರೊ ಅಂದಿನಿಂದ ಮಹಿಳಾ ಕ್ರೀಡೆಗೆ ಹೆಚ್ಚು ಹೆಚ್ಚು ಉತ್ತೇಜನ ದೊರಕಿತು ಎನ್ನಬಹುದು.
ಇದೀಗ ಭಾರತೀಯ ಮಹಿಳಾ ಹಾಕಿ ತಂಡ ಒಲಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪಿ ನಮ್ಮ ದೇಶದ ಪ್ರತಿಯೊಬ್ಬರು ಹೆಮ್ಮೆಯಿಂದ ತಲೆಯೆತ್ತುವಂತೆ ಮಾಡಿದೆ ಮತ್ತು ತಾನೊಬ್ಬಳು ಆಟಗಾರ್ತಿ ಆಗಬೇಕೆಂಬ ಕನಸು ಗೊತ್ತಿದ್ದ ಸಾಕಷ್ಟು ಮಹಿಳೆಯರಿಗೆ ಸ್ಪೂರ್ತಿ ಹಾಗೂ ಹುರುಪನ್ನು ತುಂಬಿದೆ.
ಇವತ್ತಿನ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ನಿಜವಾಗಲೂ ಸೋಲಲಿಲ್ಲ ಖಂಡಿತವಾಗಿಯೂ ಇದೊಂದು ಗೆಲುವು. ನಮ್ಮ ದೇಶದ ಪ್ರತಿಯೊಬ್ಬ ಯುವತಿಯು ಕೂಡ ತಾನೊಬ್ಬ ಆಟಗಾರ್ತಿಯಾಗಿ ದೇಶವನ್ನು ಪ್ರತಿನಿಧಿಸಬೇಕು ಎಂಬ ಕನಸಿಗೆ ನೀರೆರೆದು ಪೋಷಿಸಿ ದಂತಹ ಪಂದ್ಯ ಇದು. ಅಂತಹ ಒಂದು ಆಟವನ್ನು ವಿರೋಚಿತವಾಗಿ ಆಡಿದ್ದಾರೆ. ಇಂದಿನ ಪಂದ್ಯದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ಆದರೆ ಆಟಗಾರ್ತಿ ಮಹಿಳೆಯರಿಗೆ ಉತ್ತಮ ಭವಿಷ್ಯವನ್ನು ತೋರಿಸಿ ಕೊಟ್ಟಂತಹ , ದಾರಿದೀಪವಾದಂತಹ ಪಂದ್ಯ ಇದು… ನಿಮ್ಮ ಈ ಸಾಧನೆಗೆ ಇಡೀ ದೇಶದ ಜನತೆಯೆ ತಲೆ ಬಾಗಿದ್ದಾರೆ..
ಪಂದ್ಯ ಸೋತಿರಬಹುದು ಆದರೆ ಎಲ್ಲರ ಮನಸ್ಸನ್ನು ಗೆದ್ದಿದ್ದೀರಾ. ವೆಲ್ ಡನ್ ಗರ್ಲ್ಸ್. ಈ ದೇಶದ ವೀರ ವನಿತೆಯರು ನೀವು ನಿಮಗೆಲ್ಲರಿಗೂ ನನ್ನದೊಂದು ಸಲಾಂ
ಬರಹ : ಸೂರಜ್ ಶೆಟ್ಟಿ ಮಂಗಳೂರು