ಲಯನ್ಸ್ ಕ್ಲಬ್ ಬಂಟಕಲ್: ಅಧ್ಯಕ್ಷರಾಗಿ ಎಡ್ವರ್ಡ್ ಮೆನೇಜಸ್ ಅಧಿಕಾರ ಸ್ವೀಕಾರ

ಉಡುಪಿ ಜು.26(ಉಡುಪಿ ಟೈಮ್ಸ್ ವರದಿ): ಲಯನ್ಸ್ ಕ್ಲಬ್ ಬಂಟಕಲ್ ಹಾಗೂ ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಮತ್ತು ಲಿಯೋ ಕ್ಲಬ್ ಇದರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬಂಟಕಲ್ ನ ಝಿಝೂ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ, ಪದಗ್ರಹಣ ಅಧಿಕಾರಿಯಾಗಿರುವ ಲ. ಮಹಮ್ಮದ್ ಹನೀಫ್ ಎಂ.ಜೆ.ಎಫ್ ಅವರು ಮಾತನಾಡಿ, ಲಯನ್ಸ್ ಕ್ಲಬ್ ನಲ್ಲಿ ಉತ್ತಮ ಬಾಂಧವ್ಯ ದ ವಾತಾವರಣ ಇದೆ. ಉತ್ತಮ ಕಾರ್ಯಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಕ್ಲಬ್ ಒಂದು ಅತ್ಯುತ್ತಮ ಕ್ಲಬ್ ಆಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಲೈಫ್ ಸೇವರ್ ವಾಟರ್ ಬಾಯ್ ಈಶ್ವರ್ ಮಲ್ಪೆ ಅವರನ್ನು ಗೌರವಿಸಲಾಯಿತು.

ಇದೇ ವೇಳೆ ನೂತನ ಅಧ್ಯಕ್ಷ ರಿಗೆ ಕ್ಲಬ್ ನಲ್ಲಿ ಇತರರೊಂದಿಗೆ ಹೇಗೆ ಇರಬೇಕು. ಕ್ಲಬ್ ನಲ್ಲಿ ಕೈಗೊಳ್ಳಬೇಕಾದ  ಕಾರ್ಯಕ್ರಮಗಳು ಹಾಗೂ ಕ್ಲಬ್ ನ ಜವಾಬ್ದಾರಿಗಳ ಬಗ್ಗೆ ಸಲಹೆ ನೀಡಿ ಶುಭ ಹಾರೈಸಿದರು.

ಈ ವೇಳೆ ಲಯನ್ಸ್ ಕ್ಲಬ್ ಬಂಟಕಲ್ ಬಿಸಿ ರೋಡ್ ಇದರ  ನೂತನ ಸಾಲಿನ ಅಧ್ಯಕ್ಷ ಎಡ್ವರ್ಡ್ ಮೆನೇಜಸ್ ಪಲ್ಕೆ ಪಾಂಬೂರು ಅವರು ಮಾತನಾಡಿ,ಅಧ್ಯಕ್ಷರಾದವರಿಗೆ ಕ್ಲಬ್ ನ ಕುರಿತಾಗಿ ತುಂಬಾನೇ ಜವಾಬ್ದಾರಿ ಇದೆ. ಇದನ್ನು ಮುಂದುವರೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಲಯನ್ಸ್ ಎನ್ನುವುದು ನಾನು ಅಲ್ಲ ಅದು ನಾವು ಎನ್ನುವುದಾಗಿದೆ ಹಾಗಾಗಿ ಎಲ್ಲರ ನ್ನು ಸೇರಿ ಉತ್ತಮ ಕೆಲಸಗಳನ್ನು ಮಾಡಬೇಕಿದೆ. ಈ ಮೂಲಕ ಬಂಟಕಲ್ ನ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವಂತೆ ಮಾಡಬೇಕು ಎಂದರು. ಇದೇ ವೇಳೆ ಪದಾಧಿಕಾರಿಗಳಿಗೆ ಸಮಯ ಪರಿಪಾಲನೆಯ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬಂಟಕಲ್ ಬಿಸಿ ರೋಡ್ ಇದರ ನೂತನ ಸಾಲಿನ ಅಧ್ಯಕ್ಷ ಎಡ್ವರ್ಡ್ ಮೆನೇಜಸ್ ಪಲ್ಕೆ ಪಾಂಬೂರು ಹಾಗೂ ಪದಾಧಿಕಾರಿಗಳಾದ ಕಾರ್ಯದರ್ಶಿ ಲ. ಅನಿತಾ ಡಿಸಿಲ್ವ, ಖಜಾಂಚಿ ಲ.ರೋನಿ ಕ್ವಾರ್ಡಸ್, ಹಾಗೂ ಈ ವರ್ಷ ನೂತನವಾಗಿ ಆರಂಭಗೊಂಡಿರುವ ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಇದರ ಅಧ್ಯಕ್ಷ ಲ. ಮಾಬೆಲ್ ಮಿನೇಜಸ್, ಕಾರ್ಯದರ್ಶಿ ಲ. ಅನೀತಾ ಮೆಂಡೋಸಾ, ಖಜಾಂಚಿ ಲ. ಐರನ್ ಸಿಕ್ವೆರಾ, ಮತ್ತು ಲಿಯೋ ಕ್ಲಬ್ ಇದರ ಅಧ್ಯಕ್ಷ  ಲಿಯೋ ಗ್ಲೆನ್, ಕಾರ್ಯದರ್ಶಿ ಲಿಯೋ ಅರೋನ್ ಡಿಸೋಜಾ, ಖಜಾಂಚಿ ಲಿಯೋ ನಿಶಾಂತ್ ಹಾಗೂ ಕ್ಲಬ್ ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲ. ವಿಜಯ ಧೀರಜ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಇದರ ಕಾರ್ಯದರ್ಶಿ ಲ. ಅನೀತಾ ಮೆಂಡೋಸಾ ಹಾಗೂ ಲಯನ್ಸ್ ಕ್ಲಬ್ ಬಂಟಕಲ್ ಬಿಸಿ ರೋಡ್ ಇದರ ಸ್ಥಾಪಕ ಅಧ್ಯಕ್ಷ ಕೆ.ಆರ್ ಪಾಟ್ಕರ್ ಅವರು ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಬಂಟಕಲ್ ಬಿಸಿ ರೋಡ್ ಇದರ‌ ಕಾರ್ಯದರ್ಶಿ ಲ. ಅನಿತಾ ಡಿಸಿಲ್ವ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!