ಉಡುಪಿ: ಜು.27 ರಂದು ಲಸಿಕಾ ಲಭ್ಯತೆ ವಿವರ

ಉಡುಪಿ ಜುಲೈ 26: ಜಿಲ್ಲೆಯಲ್ಲಿ ಜು. 27 ರಂದು ನಗರ ಪ್ರದೇಶದ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾ ಗುಂಪಿನವರು, ಆರೋಗ್ಯ ಕಾರ್ಯಕರ್ತರ, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ, 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ವಿಕಲಚೇತನರಿಗೆ ಮತ್ತು ಅವರಆರೈಕೆದಾರರಿಗೆ ಕೋವಿಡ್-19 2 ನೇ ಡೋಸ್ ಲಸಿಕೆ ಲಭ್ಯವಿರುತ್ತದೆ.

ಅಜ್ಜರಕಾಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ 2 ನೇ ಡೋಸ್ ಕೋವಿಶೀಲ್ಡ್ 150 ಡೋಸ್
ಲಸಿಕೆ ಮತ್ತು ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಗಸ್ಟ್ 3 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ
ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2 ನೇ ಡೋಸ್ ಕೋವಿಶೀಲ್ಡ್ 100 ಡೋಸ್ ಲಸಿಕೆ
ಲಭ್ಯವಿರುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು,
ದುರ್ಬಲ ಗುಂಪಿನ ಫಲಾನುಭವಿಗಳು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟ ಸಾರ್ವಜನಿಕರು, ವಿಕಲಚೇತನರು ಮತ್ತು ಅವರ ಆರೈಕೆದಾರರು ಕೋವಿಡ್-19 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕೆ ಲಭ್ಯವಿದ್ದಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!