ಕುಂದಾಪುರ: ಯುವ ಪ್ರತಿಭೆಗಳ ಕೈಚಳಕದಲ್ಲಿ ಮೊದಲ ತ್ರೀಡಿ ಆನಿಮೇಟೆಡ್ ಕಾರ್ಟೂನ್ ಕಿರುಚಿತ್ರ

ಉಡುಪಿ.ಜು23(ಉಡುಪಿ ಟೈಮ್ಸ್ ವರದಿ): ಸಾಮಾಜಿಕ ಜಾಲತಾಣದಲ್ಲಿ ಸಿಗುವ ವಿವಿಧ ಆ್ಯಪ್‍ಗಳು ಕೇವಲ ಮನರಂಜನೆಗೆ ಮಾತ್ರವಲ್ಲ ಅವುಗಳನ್ನು ಸರಿಯಾದ ಉದ್ದೇಶಕ್ಕೆ ಬಳಕೆ ಮಾಡಿದರೆ ಅದರಿಂದ ಉತ್ತಮ ಫಲಿತಾಂಶ ಸಿಗುತ್ತೆ ಅನ್ನೋದಕ್ಕೆ “ಬಿ.ಸಿ” (ಬಿ ಕ್ರೇಝಿ) ಎನ್ನುವ ಕಿರು ಚಿತ್ರ ಸಾಕ್ಷಿಯಾಗಿದೆ.

ಮೊಬೈಲ್ ಆಪ್‍ಗಳನ್ನು ಬಳಸಿಕೊಂಡು ಕುಂದಾಪುರದ ಪ್ರತಿಭೆಗಳು ಜಗತ್ತಿನ ಮೊಟ್ಟ ಮೊದಲ ತ್ರೀಡಿ ಆನಿಮೇಟೆಡ್ ಮೊಬೈಲ್ ಫೋನ್ ಕಾರ್ಟೂನ್ ಕಿರುಚಿತ್ರ ನಿರ್ಮಿಸಿದ್ದಾರೆ.

ಸ್ನ್ಯಾಪ್ ಚಾಟ್ ಫಿಲ್ಟರ್ ಬಳಸಿ “ಬಿ ಕ್ರೇಝಿ” ಕಿರುಚಿತ್ರವನ್ನು ತಯಾರಿಸಲಾಗಿದ್ದು, ಈ ಕಿರುಚಿತ್ರ ಇಂದು ಕಥಾ ನಿಲ್ದಾಣ ಎಂಬ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಂಡಿದೆ.  

ಕುಂದಾಪುರದ ಸುಜನ್ ಶೆಟ್ಟಿ ಅವರು ಈ ಕಿರುಚಿತ್ರಕ್ಕೆ ಕಥೆ, ಚಿತ್ರ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ರಾಹುಲ್ ಸಾಲಿಗ್ರಾಮ, ಶಶಾಂಕ್ ಶೆಟ್ಟಿ, ಸಂದೇಶ್ ಆಚಾರ್ಯ, ಗಣೇಶ್ ಪಿ, ಪ್ರಜ್ವಲ್ ಕೋಣಿಮನೆ, ಹೇಮಂತ್ ಸುರತ್ಕಲ್, ಮಹೇಶ್ ಕುಮಾರ್, ಶ್ರಜನ್ ಹೊಸ್ಮನೆ, ಅನ್ವಯ ಕೂರ್ಗಿ ಸಹಕಾರ ನೀಡಿದ್ದಾರೆ.

ಇಂತಹ ಹೊಸದಾದ ಪ್ರಯತ್ನದ ಮೂಲಕ ಈ ಪ್ರತಿಭೆಗಳು ಸಮಾಜಕ್ಕೆ ಮೊಬೈಲ್ ಬಳಕೆಯ ಉತ್ತಮ ಸಂದೇಶ ನೀಡಿದ್ದಾರೆ. ಇದೀಗ ಮೊಬೈಲ್‍ನಲ್ಲಿ ಜಗತ್ತಿನಲ್ಲೇ ಮೊಟ್ಟ ಮೊದಲ ತ್ರಿ ಡಿ ಆನಿಮೆಟೆಡ್ ಕಿರುಚಿತ್ರ ತಯಾರಿಸಿರುವುದು ಕುಂದಾಪುರ ಪ್ರತಿಭೆಗಳು ಎನ್ನುವುದು ಉಡುಪಿ ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.

ಈ ಯುವಕರ ಪ್ರಯತ್ನಕ್ಕೆ ಹಾಗೂ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಅವರ ಈ ಕಿರು ಚಿತ್ರವನ್ನು ಹೆಚ್ಚು ಹೆಚ್ಚು ವೀಕ್ಷಿಸುವ ಮೂಲಕ ಸಹಕಾರ ನೀಡಬೇಕಾಗಿದೆ. ಇವರ ಕಿರುಚಿತ್ರವು   https://youtu.be/iLBkdUAzp2s ನಲ್ಲಿ ಲಭ್ಯವಿದೆ.

Leave a Reply

Your email address will not be published. Required fields are marked *

error: Content is protected !!