| ಮುಂಬಯಿ ಜು.22: ನೀಲಿ ಚಿತ್ರಗಳ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಭವಿಷ್ಯದಲ್ಲಿ ನೀಲಿ ಚಿತ್ರಗಳ ನೇರಪ್ರಸಾರ ಮಾಡುವ ಯೋಜನೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಮೂಲಗಳು ಬಾಲಿವುಡ್ನಂತೆಯೇ ನೀಲಿಚಿತ್ರ ದಂಧೆಯನ್ನು ಉದ್ಯಮ ಮಾಡಿಕೊಳ್ಳುವುದು. ಹಾಗೂ ಆ್ಯಪ್ಗಳಲ್ಲಿ ನೀಲಿ ಚಿತ್ರಗಳನ್ನು ನೇರಪ್ರಸಾರ ಮಾಡುವ ಮೂಲಕ ಕೋಟ್ಯಂತರ ರೂ. ಗಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿವೆ.
ನೀಲಿಚಿತ್ರ ನಿರ್ಮಾಣ ಹಾಗೂ ಆ್ಯಪ್ಗಳ ಮೂಲಕ ಅವುಗಳ ಹಂಚಿಕೆ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರಾರನ್ನು ಬಂಧಿಸಿ, ಜುಲೈ 23 ರವರೆಗೆ ವಶಕ್ಕೆ ಪಡೆದಿರುವ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ಈ ಮಾಹಿತಿ ಲಭ್ಯವಾಗಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 11 ಮಂದಿಯನ್ನು ಬಂಧಿಸಿದ್ದು, ಈ ಪ್ರಕರಣದ ಜಾಲದ ವ್ಯಾಪ್ತಿ ಇನ್ನೂ ಹೆಚ್ಚುತ್ತಿದೆ ಎನ್ನಲಾಗಿದೆ. ಮುಂಬಯಿ ಅಪರಾಧ ವಿಭಾಗದ ಪೊಲೀಸರು ರಾಜ್ ಕುಂದ್ರಾ ಸೇರಿ ಹಲವು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡು ಬ್ಯಾಂಕ್ ಖಾತೆಗಳ ಮಧ್ಯೆ ಕೇಸ್ ದಾಖಲಾಗುವ ಒಂದು ತಿಂಗಳು ಮುಂಚೆ, ಅಂದರೆ ಕಳೆದ ಜನವರಿಯಲ್ಲಿ ವಹಿವಾಟು ನಡೆಸಲಾಗಿದೆ ಎಂದು ವರದಿಯಾಗಿದೆ.
| |