ವಿಶಾಲ ಗಾಣಿಗ ಕೊಲೆ ಪ್ರಕರಣ: ಪತಿಗೆ ಪೊಲೀಸ್ ಕಸ್ಟಡಿ, ಸುಪಾರಿ ಕಿಲ್ಲರ್ ವಶಕ್ಕೆ

ಉಡುಪಿ, ಜು.20: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಸುದ್ದಿಯಲ್ಲಿರುವ ಕುಮ್ರಗೋಡಿನಲ್ಲಿ ನಡೆದ ವಿಶಾಲ ಗಾಣಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ವಿಶಾಲ ಗಾಣಿಗ ಅವರ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಮತ್ತು ಸುಪಾರಿ ಕಿಲ್ಲರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಮಕೃಷ್ಣ ಗಾಣಿಗನನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅದರಂತೆ ತನಿಖೆ ನಡೆಸಿ ಜು.23 ರಂದು ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರು ಸುಪಾರಿ ಕಿಲ್ಲರ್‍ಗಳು ಸೇರಿ ಈ ಕೃತ್ಯ ನಡೆಸಿದ್ದು ತಲೆಮರೆಸಿಕೊಂಡಿರುವ ಇನ್ನೋರ್ವ ಸುಪಾರಿ ಕಿಲ್ಲರ್‍ನ ಬಂಧನಕ್ಕೆ ಪೊಲೀಸರು ಶೊಧ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಓರ್ವ ಸುಪಾರಿ ಕಿಲ್ಲರ್ ನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿ ಉಡುಪಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜು.2ರಂದು ತನ್ನ ಮಗಳೊಂದಿಗೆ ಊರಿಗೆ ಬಂದಿದ್ದ ವಿಶಾಲ ಗಾಣಿಗ ಅವರು ಕುಮ್ರಗೋಡುವಿನ ಫ್ಲಾಟ್‍ನಲ್ಲಿ ವಾಸವಾಗಿದ್ದರು. ಜು.7 ರಂದು ರಾಮಕೃಷ್ಣರವರ ಆಸ್ತಿ ಪಾಲು ಪಟ್ಟಿ ಆಗಿದ್ದು, ಜು.12ರಂದು ವಿಶಾಲ ಗಾಣಿಗ ತನ್ನ ತಂದೆ ತಾಯಿ ಮತ್ತು ಮಗಳೊಂದಿಗೆ ರಿಕ್ಷಾದಲ್ಲಿ ಫ್ಲಾಟ್‍ನಿಂದ ತಾಯಿ ಮನೆಯಾದ ಗುಜ್ಜಾಡಿಗೆ ಹೋಗಿದ್ದರು. ಅಲ್ಲಿಂದ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುವುದಾಗಿ ತಿಳಿಸಿ ವಾಪಾಸ್ಸಾಗಿದ್ದರು.

ಈ ವೇಳೆ ಮಹಿಳೆ ಫ್ಲಾಟ್‍ನಲ್ಲಿ ಇದ್ದ ವೇಳೆ ಕಿಲ್ಲರ್‍ಗಳು ಫ್ಲಾಟ್‍ಗೆ ನುಗ್ಗಿ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಪ್ರಕರಣದ ದಿಕ್ಕು ತಪ್ಪಿಸುವ ಸಲುವಾಗಿ ವಿಶಾಲ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿ ದ್ದರು.

ನಂತರ ದುಬೈಯಿಂದ ಊರಿಗೆ ಬಂದಿದ್ದ ರಾಮಕೃಷ್ಣನನ್ನು ಪೆÇಲೀಸರು ಎರಡು ಮೂರು ಬಾರಿ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಸಂಶಯದ ಮೇರೆಗೆ ಕೆಲವೊಂದು ಮಾಹಿತಿಗಾಗಿ ಎರಡು ದಿನಗಳ ಹಿಂದೆ ಆತನನ್ನು ಮತ್ತೆ ಪೆÇಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು. ಆಗ ಆತನೇ ಸುಪಾರಿ ನೀಡಿ ಕೊಲೆಗೈದಿರುವುದು ತಿಳಿದುಬಂದಿದೆ ಅದರಂತೆ ಪೊಲೀಸರು ಆತನನ್ನು ಬಂಧಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಲೆಗೆ ಇವರಿಬ್ಬರ ಮಧ್ಯೆ ಇದ್ದ ವೈಮನಸ್ಸೇ ಕಾರಣ ಎಂದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ. ಆದರೆ ಇದರ ಹಿಂದೆಯೇ ಬೇರೆ ಕಾರಣ ಇರಬಹುದು ಎಂದು ಪೆÇಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಅದರಂತೆ ಆತನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Leave a Reply

Your email address will not be published. Required fields are marked *

error: Content is protected !!