ರಫೇಲ್ ಒಪ್ಪಂದ ಭ್ರಷ್ಟಾಚಾರ: ತನಿಖೆಗೆ ಫ್ರೆಂಚ್ ಆದೇಶ- ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್

ನವದೆಹಲಿ: ರಫೇಲ್ ಒಪ್ಪಂದದಲ್ಲಿ ‘ಭ್ರಷ್ಟಾಚಾರ ಮತ್ತು ಒಲವು’ ಬಗ್ಗೆ ತನಿಖೆ ನಡೆಸಲು ಫ್ರೆಂಚ್ ಅಧಿಕಾರಿಗಳು ಆದೇಶಿಸಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು, ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರ ಜೇಬು ತುಂಬುವ ವಿಷಯ ಬಂದಾಗ ಮೋದಿ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆಯ ವಿಚಾರಗಳು ಲೆಕ್ಕಕ್ಕೆ ಬರುವುದಿಲ್ಲ ಎಂದು ಹೇಳಿದರು. 

ಸ್ವಾತಂತ್ರ್ಯ ನಂತರ ಎಲ್ಲಾ ಕೇಂದ್ರ ಸರ್ಕಾರಗಳು ರಾಷ್ಟ್ರೀಯ ಭದ್ರತೆಯನ್ನು ಗಂಭೀರ ವಿಷಯವೆಂದು ಪರಿಗಣಿಸಿವೆ. ಅಲ್ಲದೆ ಅದನ್ನು ರಾಜಕೀಯಗೊಳಿಸುವುದನ್ನು ಬಿಟ್ಟುಬಿಟ್ಟಿವೆ. ಆದರೆ ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆಯು ಅತ್ಯುನ್ನತವಾದದು ಮತ್ತು ಯಾವುದೇ ರಾಜಿ ಮಾಡಿಕೊಳ್ಳಬಾರದು. ಇನ್ನು ರಫೇಲ್ ಒಪ್ಪಂದ ಕುರಿತು ಪ್ರತಿಯೊಬ್ಬ ಜವಾಬ್ದಾರಿಯುತ ಭಾರತೀಯನು ಕೇಳುವ ಒಂದು ಪ್ರಶ್ನೆ ಇದೆ. ಭಾರತ ಸರ್ಕಾರ ಇನ್ನೂ ಏಕೆ ಮೌನವಾಗಿದೆ? ಖೇರಾ ಪತ್ರಿಕಾಗೋಷ್ಠಿಯಲ್ಲಿ ಕೇಳಿದರು.

ರಫೇಲ್ ಯುದ್ಧ ವಿಮಾನ ಒಪ್ಪಂದವು ಭಾರತ ಮತ್ತು ಫ್ರಾನ್ಸ್ ನಡುವಿನ ಅಂತರ್-ಸರ್ಕಾರಿ ಒಪ್ಪಂದವಾಗಿದೆ ಅಂದರೆ ಉಭಯ ದೇಶಗಳ ಸರ್ಕಾರಗಳು ಎರಡೂ ಬದಿಯಲ್ಲಿವೆ ಎಂದು ಅವರು ಹೇಳಿದರು. 

ಒಪ್ಪಂದದ ಪಕ್ಷಗಳಲ್ಲಿ ಒಬ್ಬರಾಗಿದ್ದ ಫ್ರಾನ್ಸ್‌ನ ಹಿಂದಿನ ಅಧ್ಯಕ್ಷರ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ಈಗ ಫ್ರೆಂಚ್ ಪಬ್ಲಿಕ್ ಪ್ರಾಸಿಕ್ಯೂಷನ್ ಸರ್ವೀಸಸ್(ಪಿಎನ್‌ಎಫ್) ತನಿಖೆ ಆರಂಭಿಸಿದೆ ಎಂದು ಖೇರಾ ತಿಳಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಭಾರತ ಸರ್ಕಾರ ಇಲ್ಲಿಯವರೆಗೂ ಯಾವುದೇ ವಿಚಾರಣೆಗೆ ಏಕೆ ಆದೇಶಿಸಲಾಗಿಲ್ಲ? ಈ ಸಂಪೂರ್ಣ ಹಗರಣದ ಬಗ್ಗೆ ಈ ಸರ್ಕಾರ ಮತ್ತು ಅದರ ಮಂತ್ರಿಗಳು ಸೈಲೆಂಟ್ ಆಗಿ ಕುಳಿತಿರುವುದು ಭಾರತದ ಜನರಿಗೆ ಅಪಮಾನಕರವಾಗಿದೆ. ರಕ್ಷಣಾ ಸಚಿವರು ಹೊಣೆಗಾರಿಕೆ ಮತ್ತು ಪರಿಶೀಲನೆಯ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಅವರು ಕೇಳಿದರು.

ನ್ಯಾಯಯುತ ಜಂಟಿ ಸಂಸದೀಯ ಸಮಿತಿಯನ್ನು(ಜೆಪಿಸಿ) ತಕ್ಷಣವೇ ರಚಿಸಬೇಕು ಮತ್ತು ರಫೇಲ್ ಒಪ್ಪಂದದ ಪ್ರತಿಯೊಂದು ಅಂಶಗಳು ಅದನ್ನು ತನಿಖೆ ಮಾಡಬೇಕೆಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒತ್ತಾಯಿಸುತ್ತದೆ. ಅಲ್ಲದೆ ಭಾರತೀಯರು ಸತ್ಯವನ್ನು ತಿಳಿದುಕೊಳ್ಳಲು ಅರ್ಹರು ಎಂದು ಖೇರಾ ಹೇಳಿದರು.

Leave a Reply

Your email address will not be published. Required fields are marked *

error: Content is protected !!