ಜು.7 ರಿಂದ ರೈಲಿನಲ್ಲೇ ಕೂತು ಪಶ್ಚಿಮಘಟ್ಟದ ಸೊಬಗು ಕಣ್ತುಂಬಿಕೊಳ್ಳಿ…!

ಮಂಗಳೂರು ಜು.4: ಇನ್ನು ರೈಲಿನಲ್ಲೇ ಕೂತು ಪಶ್ಚಿಮಘಟ್ಟದ ಸೊಬಗನ್ನು ಆಸ್ವಾದಿಸಬಹುದು. ಯಾಕೆಂದರೆ ಗಾಜಿನ ಛಾವಣಿ (ವಿಸ್ಟಾಡೋಮ್) ಹೊಂದಿರುವ ಬೋಗಿಗಳನ್ನೊಳಗೊಂಡ ಬೆಂಗಳೂರು- ಮಂಗಳೂರು ರೈಲು ಜು.7 ರಿಂದ ಆರಂಭವಾಗಲಿದೆ. ಈ ಮೂಲಕ ಶಿರಾಡಿ ಘಾಟಿಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.

ಈ ರೈಲಿನ ಟಿಕೆಟ್ ದರ 1470ರೂ.ನಿಗದಿಪಡಿಸಲಾಗಿದೆ. ಮೊದಲ ರೈಲು ಜು.7ರಂದು ಯಶವಂತಪುರ ಜಂಕ್ಷನ್’ನಿಂದಹೊರಡಲಿದೆ. ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಬೋಗಿಗಳನ್ನು ಜೋಡಿಸಲಾಗುತ್ತದೆ. ಇದರಿಂದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣ ದವರೆಗೆ 56 ಕಿಮೀ. ಉದ್ದದ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ, ನದಿ,ತೊರೆ, ಜಲಪಾತಗಳು ಸೊಬಗನ್ನು ಪ್ರಯಾಣಿಕರು ಆಸ್ವಾದಿಸ ಬಹುದಾಗಿದೆ. ಹಾಗೂ ಗಾಜಿನ ಚಾವಣಿಯ ಬೋಗಿಯೊಳಗೆ 360 ಡಿಗ್ರಿಯಲ್ಲಿ ಸುತ್ತುವ ಆಸನದ ವ್ಯವಸ್ಥೆ ಅಳವಡಿಸಲಾಗಿದೆ.

ಪಾರದರ್ಶಕ ಗಾಜಿನ ಕೋಚ್ ಆಗಿರುವುದರಿಂದ ಪ್ರಯಾಣಿಕರು ತನ್ನ ಇಕ್ಕಲೆಗಳ ಪ್ರಕೃತಿ ಸೊಬಗಿನ ಜತೆಗೆ ಎತ್ತರದ ಬೆಟ್ಟ, ಗಿರಿ, ಕಾನನ ಹಾಗೂ ಜಲಪಾತಗಳ ವೈಭವವನ್ನು ಕುಳಿತಲ್ಲೇ ಸವಿಯಬಹುದಾಗಿದೆ. ಬೋಗಿಯಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವೆನ್, ಸಣ್ಣ ಫ್ರಿಡ್ಜ್ ಮತ್ತು ಎಸಿ ಸೌಲಭ್ಯವಿರುತ್ತದೆ ಎಂದು ತಿಳಿದು ಬಂದಿದೆ.

1 thought on “ಜು.7 ರಿಂದ ರೈಲಿನಲ್ಲೇ ಕೂತು ಪಶ್ಚಿಮಘಟ್ಟದ ಸೊಬಗು ಕಣ್ತುಂಬಿಕೊಳ್ಳಿ…!

  1. Fantastic information thank you very much for the same. Very eager to go through this journey.

Leave a Reply

Your email address will not be published. Required fields are marked *

error: Content is protected !!