ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ವತಿಯಿಂದ ವೈದ್ಯರ ದಿನಾಚರಣೆ

ಉಡುಪಿ ಜು.3(ಉಡುಪಿ ಟೈಮ್ಸ್ ವರದಿ): ಕರಾವಳಿಯ ಪ್ರಸಿದ್ಧ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ವತಿಯಿಂದ ವೈದ್ಯರ ದಿನಾಚರಣೆಯನ್ನು ಉಡುಪಿ ಮತ್ತು ಮಂಗಳೂರಿನಲ್ಲಿ ಆಚರಿಸಲಾಯಿತು.

ಸೀನಿಯರ್ ಚೆಂಬರ್ ಉಡುಪಿ ಟೆಂಪಲ್ ಸಿಟಿ ಹಾಗೂ ಮಂಗಳೂರಿನ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಮಂಗಳೂರು ಘಟಕ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳನ್ನು ಸನ್ಮಾನಿಸಲಾಯಿತು. ಈ ಮೂಲಕ ನಾಡಿನ ಎಲ್ಲಾ ವೈದ್ಯರುಗಳಿಗೂ ಗೌರವ ಸೂಚಿಸಿ ವೈದ್ಯರ ದಿನಾಚರಣೆಯ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನ ಪಾಲುದಾರರಾದ ರವೀಂದ್ರ ಶೆಟ್ಟಿ, ಮಾರ್ಕೆಟಿಂಗ್ ಮ್ಯಾನೇಜರ್ ಪ್ರಕಾಶ್ ಗಂಗೊಳ್ಳಿ,ಪ್ರೀತಮ್, ಸೀನಿಯರ್ ಚೆಂಬರ್ ನ ಅಧ್ಯಕ್ಷ ಸುಕುಮಾರ್, ಸದಸ್ಯರಾದ ವಿಜಯ್ ಕುಮಾರ್ ಉದ್ಯಾವರ, ನವೀನ್ ಅಮಿನ್ ಶಂಕರಪುರ, ಗಂಗಾಧರ, ರೇಖಾ, ಸುಶೀಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!