ರಾಷ್ಟ್ರದ ರಾಜಧಾನಿಯಲ್ಲಿ ಬಿಸಿ ಗಾಳಿ ಬೀಸಲು ಪ್ರಾರಂಭ!
ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಬಿಸಿಲಿನ ಝಳ ವಿಪರೀತವಾಗಿ ಏರಿಕೆ ಕಂಡಿದ್ದು, ಬುಧವಾರ 43.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ತಲುಪಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಸೋಮವಾರದಿಂದ ಬಿಸಿ ಗಾಳಿ ಬೀಸುತ್ತಿದ್ದು, 43 ಡಿಗ್ರಿ ಸೆಲ್ಸಿಯಸ್ಗೂ ಅಧಿಕ ತಾಪಮಾನ ದಾಖಲಾಗಿದೆ. ಇದು ಈ ವರ್ಷ ದಾಖಲಾದ ಅತಿ ಗರಿಷ್ಠ ಉಷ್ಣಾಂಶವಾಗಿದೆ. ಮುಂಗಾರು ಮಳೆಯು ಆರಂಭವಾಗಲು ಕನಿಷ್ಠ ಒಂದು ವಾರ ಬಾಕಿ ಇರುವುದರಿಂದ ದೆಹಲಿಯ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಬಿಸಿಗಾಳಿಯು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ದೆಹಲಿಯಲ್ಲಿ ಜೂನ್ 20ರ ವೇಳೆಗೆ ಬಿಸಿ ಗಾಳಿ ಬೀಸುತ್ತದೆ. ಅದರ ಬಳಿಕ ತಾಪಮಾನ ಕಡಿಮೆಯಿರುತ್ತದೆ. ಆದರೆ ಈ ಬಾರಿ ಮುಂಗಾರು ಮಳೆ ತಡವಾಗಿರುವುದರಿಂದ ಬಹುಶಃ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಿದೆ ಎಂದು ಐಎಂಡಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ಅವರು ತಿಳಿಸಿದ್ದಾರೆ.