ಮಂದಿರಾ ಬೇಡಿ ಪತಿ, ಬಾಲಿವುಡ್ ಖ್ಯಾತ ನಿರ್ಮಾಪಕ ರಾಜ್‌ ಕೌಶಲ್‌ ನಿಧನ

ಮುಂಬೈ: ಬಾಲಿವುಡ್ ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರಾಜ್‌ ಕೌಶಲ್‌ ಇಂದು ನಿಧನರಾಗಿದ್ದಾರೆ.

49 ವರ್ಷದ ಇವರು ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಬಾಲಿವುಡ್‌ ನಟಿ, ಕಿರುತೆರೆ ನಿರೂಪಕಿ ಮಂದಿರಾ ಬೇಡಿ ಅವರ ಪತಿಯಾಗಿದ್ದು, ಬಾಲಿವುಡ್ ನಲ್ಲಿ ಅನೇಕ ಚಿತ್ರ ಗಳನ್ನು ನಿರ್ಮಿಸಿದ್ದಾರೆ. 
ಇದೀಗ ಇವರ ನಿಧನಕ್ಕೆ ಬಾಲಿವುಡ್‌ನ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ನೀಡಿದ ನಟ ರೋಹಿತ್ ರಾಯ್ ಅವರು , ಇಂದು ಬೆಳಗ್ಗೆ ರಾಜ್‌ ಕೌಶಲ್‌ ನಮ್ಮನ್ನು ಅಗಲಿದರು ಎಂದು ಬರೆದುಕೊಂಡಿದ್ದರು. ಹಾಗೂ 2005ರಲ್ಲಿ ತೆರೆಕಂಡ ‘ ಮೈ ಬ್ರದರ್‌ ನಿಖಿಲ್‌‘ ಸಿನಿಮಾದಲ್ಲಿ  ಕೌಶಲ್ ಜೊತೆ ಕೆಲಸ ಮಾಡಿದ್ದೆ ಎಂದು ರೋಹಿತ್‌ ರಾಯ್‌ ನೆನಪಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!