ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!

ನವದೆಹಲಿ: ವೊಡಾಫೋನ್ ಐಡಿಯಾ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು ಈ ವೇಳೆ ರಿಲಯನ್ಸ್ ಜಿಯೋಗೆ ಮಾತ್ರ 62.57 ಲಕ್ಷ ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಟ್ರಾಯ್ ಮಾಹಿತಿ ನೀಡಿದೆ. 

ಒಟ್ಟಾರೆ 38.28 ಕೋಟಿ ಮಂದಿ ಜಿಯೋ ಗ್ರಾಹಕರಾಗಿದ್ದರೆ, ಭಾರತಿ ಏರೆಟೆಲ್ 32.09 ಕೋಟಿ ಗ್ರಾಹಕರನ್ನು ಹೊಂದಿದೆ. ಇದೇ ವೇಳೆ ಫೆಬ್ರವರಿಯಲ್ಲಿ 4.39 ಲಕ್ಷ ಮಂದಿ ಬಿಎಸ್ಎನ್ಎಲ್ ಗೆ ಚಂದಾದಾರರಾಗಿದ್ದಾರೆ. 

ವೈರ್‌ಲೆಸ್ ಸೇವೆಗಳಿಗೆ ಚಂದಾದಾರರ ಮಾರುಕಟ್ಟೆ ಪಾಲಿನ ವಿಷಯದಲ್ಲಿ, ರಿಲಯನ್ಸ್ ಜಿಯೋ ಶೇ. 32.9ರಷ್ಟನ್ನು ಹೊಂದಿದ್ದರೆ, ಭಾರ್ತಿ ಏರ್‌ಟೆಲ್ ಶೇ. 28.35  ಮತ್ತು ವೊಡಾಫೋನ್ ಐಡಿಯಾವು ಫೆಬ್ರವರಿ 29, 2020ರ ವೇಳೆಗೆ 28 ಪ್ರತಿಶತದಷ್ಟು ಪಾಲನ್ನು ಹೊಂದಿದೆ.

ಫೆಬ್ರವರಿಯಲ್ಲಿ ಜಿಯೋ ಗರಿಷ್ಠ ಚಂದಾದಾರರನ್ನು(62.57 ಲಕ್ಷ) ಸೇರಿಸಿದರೆ, ಭಾರ್ತಿ ಏರ್‌ಟೆಲ್ 9.2 ಲಕ್ಷ ಬಳಕೆದಾರರನ್ನು ಗಳಿಸಿದೆ. ಮತ್ತೊಂದೆಡೆ ವೊಡಾಫೋನ್ ಐಡಿಯಾ ಇದೇ ಅವಧಿಯಲ್ಲಿ 34.6 ಲಕ್ಷ ಬಳಕೆದಾರರನ್ನು ಕಳೆದುಕೊಂಡಿತು.

Leave a Reply

Your email address will not be published. Required fields are marked *

error: Content is protected !!