ಬಸ್,ಮ್ಯಾಕ್ಸಿಕ್ಯಾಬ್,ಟ್ಯಾಕ್ಸಿಗಳ ತೆರಿಗೆ ಪಾವತಿಸಿ- ರಸ್ತೆಗಿಳಿಸಿದಲ್ಲಿ ಭಾರೀ ದಂಡದ ಎಚ್ಚರಿಕೆ

ಉಡುಪಿ ಜೂ.27(ಉಡುಪಿ ಟೈಮ್ಸ್ ವರದಿ): ಪ್ರಯಾಣಿಕ ವಾಹನಗಳ ಮೂಲ ದಾಖಲಾತಿಗಳೊಂದಿಗೆ ಕಚೇರಿಗೆ ಸರೆಂಡರ್ ಮಾಡಿದ್ದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಿದ ಬಳಿಕವೇ ವಾಹನಗಳನ್ನು ಉಪಯೋಗಿಸುವಂತೆ ಆರ್.ಟಿ.ಓ ಜೆ. ಪಿ. ಗಂಗಾಧರ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿನ ಪ್ರಯಾಣಿಕ ವಾಹನಗಳಾದ ಬಸ್, ಮ್ಯಾಕ್ಸಿಕ್ಯಾಬ್ ಮತ್ತು ಟ್ಯಾಕ್ಸಿಗಳ ತೆರಿಗೆಯನ್ನು ಜೂ.30 ರೊಳಗೆ ಪಾವತಿಸತಕ್ಕದ್ದು, ಹಾಗೂ ಬಾಕಿ ತೆರಿಗೆಯನ್ನು ಪಾವತಿಸದೆ/ವಿನಾಯಿತಿಯನ್ನು ಪಡೆಯದೇ, ಪೂರ್ವನುಮತಿಯಿಲ್ಲದೆ ವಾಹನವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಿದರೆ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆಯನ್ನು ಕಟ್ಟಲೆ ಬೇಕಾಗುತ್ತದೆ ಎಂದು‌ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

ಅಲ್ಲದೆ ಬಸ್ ನಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಡ್ರೈವರ್ ಹಾಗೂ ಕಂಡಕ್ಟರ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಅವರು ತಿಳಿಸಿದ್ದಾರೆ.

1 thought on “ಬಸ್,ಮ್ಯಾಕ್ಸಿಕ್ಯಾಬ್,ಟ್ಯಾಕ್ಸಿಗಳ ತೆರಿಗೆ ಪಾವತಿಸಿ- ರಸ್ತೆಗಿಳಿಸಿದಲ್ಲಿ ಭಾರೀ ದಂಡದ ಎಚ್ಚರಿಕೆ

  1. ಇವ್ರೇನು ಮನುಷ್ಯರೋ,ರಾಕ್ಷಸರೋ? ಮಾನವೀಯತೆ ಬೆಡ್ವಾ.ಹಣ ಮಾಡೋದೊಂದೆ ಇಬರ ದಂಧೆಯಾ?ಮೊದ್ಲೆ ವ್ಯಾಪಾರ ಇಲ್ಲ ಪಾಪದವ್ರಿಗೆ.ಅದ್ರ ಮೇಲೆ ಟ್ಯಾಕ್ಸ್ ಕಟ್ಟಿ ಗಾಡಿ ಓಡ್ಸೀಂದ್ರೆ ಹೇಗೆ? ನಕ್ಷತ್ಇಕನ ವಂಶದವ್ರೇನೋ?

Leave a Reply

Your email address will not be published. Required fields are marked *

error: Content is protected !!