ಡ್ರಗ್ಸ್ ಸೇವನೆ ಮನುಷ್ಯನನ್ನು ವಿನಾಶ ಮತ್ತು ಕತ್ತಲೆಯ ಕೂಪಕ್ಕೆ ತಳ್ಳುತ್ತದೆ: ಪ್ರಧಾನಿ ಮೋದಿ

ನವದೆಹಲಿ: ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುವ ಸಮುದಾಯವನ್ನು ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ದೂರವಿಡಲು ಹಾಗೂ ಆರೋಗ್ಯಕರ ಅಭ್ಯಾಸ ಗಳನ್ನು ಉತ್ತೇಜಿಸಲು, ಜನರಲ್ಲಿ ಜಾಗೃತಿ, ಅರಿವು ಕಾಳಜಿ ಮೂಡಿಸಲು ಇದನ್ನು ಆಚರಿಸಲಾಗುತ್ತಿದೆ.

ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂದು ಹಲವು ರೀತಿಯಲ್ಲಿ ಕಾರ್ಯಕ್ರಮಗಳನ್ನು, ಅರಿವು ಮೂಡಿಸುವ ಪ್ರಯತ್ನವನ್ನು ಮಾಡುತ್ತಿವೆ. ಕರ್ನಾಟಕ ಸರ್ಕಾರ ರಾಜ್ಯದ ಹಲವು ಭಾಗಗಳಲ್ಲಿ ಮಾದಕ ವಸ್ತು ವಿರೋಧಿ ದಿನವನ್ನು ಆಯೋಜಿಸಿದೆ.

ಮಾದಕ ವಸ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸೋಣ. ನಮ್ಮ ದೇಶವನ್ನು ಮಾದಕ ವಸ್ತು ಬಳಕೆ ಮತ್ತು ಸೇವನೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ಮತ್ತು ಡ್ರಗ್ಸ್ ಮುಕ್ತ ಭಾರತದ ನಮ್ಮ ದೃಷ್ಟಿಯನ್ನು ಅರಿತುಕೊಳ್ಳೋಣ.

ಚಟ ಎನ್ನುವುದು ಮನುಷ್ಯನ ಫ್ಯಾಶನ್ ಅಲ್ಲ ಅಥವಾ ಒಳ್ಳೆಯ ಅಭ್ಯಾಸವಲ್ಲ, ಅದರಿಂದ ಹೊರಬರುವುದು ಹೇಗೆ ಎಂಬ ಬಗ್ಗ ಕಳೆದ ವರ್ಷ ಮನ್ ಕಿ ಬಾತ್ ನಲ್ಲಿ ಆಡಿದ್ದ ಮಾತುಗಳನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಂದು, ಮಾದಕವಸ್ತು ಸಂಗ್ರಹ, ಅಕ್ರಮ ಕಳ್ಳಸಾಗಣೆ ಮತ್ತು ಸೇವನೆ ವಿರುದ್ಧದ ಅಂತರಾಷ್ಟ್ರೀಯ ದಿನದಂದು, ನಮ್ಮ ಸಮಾಜ ದಿಂದ ಮಾದಕ ದ್ರವ್ಯಗಳ ಭೀತಿಯನ್ನು ತೊಡೆದುಹಾಕಲು ತಳಮಟ್ಟದಲ್ಲಿ ಕೆಲಸ ಮಾಡುವ ಎಲ್ಲರನ್ನು ನಾನು ಶ್ಲಾಘಿಸುತ್ತೇನೆ. ಈ ನಿಟ್ಟಿನಲ್ಲಿ ಇಂದು ಪ್ರಯತ್ನ ಅತ್ಯಗತ್ಯ. ಮಾದಕ ವಸ್ತು ಮನುಷ್ಯನನ್ನು ಕತ್ತಲೆಯ ಕೂಪಕ್ಕೆ ತಳ್ಳಿ ಸಂಪೂರ್ಣ ನಾಶ ಮಾಡುತ್ತದೆ ಎಂದಿದ್ದಾರೆ.

ಅನೇಕ ಗಣ್ಯರು ಕೂಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಮಾದಕ ವಸ್ತು ಸೇವನೆಯ ಬಳಕೆಯಿಂದ ದೂರವಿರೋಣ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!