ಜನನ ಮತ್ತು ಮರಣ ನೋಂದಣಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ- ರಿಜಿಸ್ಟ್ರಾರ್ ಜನರಲ್ ಆದೇಶ
ಹೊಸದಿಲ್ಲಿ ಜೂ.20: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದಾರೆ.
ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರಲ್ಲಿ ಆಧಾರ್ ಮಾಹಿತಿ ಮೂಲಕ ನೋಂದಣಿ ಕಾಯ್ದೆಗೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಆದ್ದರಿಂದ ಜನನ ಮತ್ತು ಮರಣ ನೋಂದಣಿ ಮಾಡುವ ಸಂದರ್ಭದಲ್ಲಿ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಜನನ ಮತ್ತು ನೋಂದಣಾಧಿಕಾರಿಗಳು ಆಧಾರ್ ಸಂಖ್ಯೆಯನ್ನು ಕಡ್ಡಾಯ ವಾಗಿ ನೀಡಬೇಕು ಎಂದು ಸೂಚಿಸ ಬಾರದು ಎಂದು ರಿಜಿಸ್ಟ್ರಾರ್ ಜನರಲ್ ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದಾರೆ.
ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಬಳಕೆ ಮಾಡುತ್ತಿವೆ ಎಂದು ರಿಜಿಸ್ಟ್ರಾರ್ ಜನರಲ್ ತಿಳಿಸಿದ್ದಾರೆ. ಆದರೆ, ರಾಜ್ಯ ಸರಕಾರಗಳು 2017ರ ಆಗಸ್ಟ್ನಲ್ಲಿ ಬಂದ ನಿರ್ದೇಶನದ ಅನ್ವಯ ಈ ಕ್ರಮಕೈಗೊಳ್ಳ ಲಾಗುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಪ್ರಕಾರ ಅಸುನೀಗಿದ ವ್ಯಕ್ತಿ ಆಧಾರ್ ಕಾರ್ಡ್ ಹೊಂದಿಲ್ಲ ಎಂಬುದಕ್ಕೆ ಆತನ ಕುಟುಂಬಸ್ಥರು ಪ್ರಮಾಣ ಪತ್ರ ಸಲ್ಲಿಸಬೇಕು. 2016ರ ಆಧಾರ್ ಕಾಯ್ದೆಯ ಸೆಕ್ಷನ್ 57ರ ಪ್ರಕಾರ “ಕಾನೂನು ಪ್ರಕಾರವಾಗಿ ರುವ ಯಾವುದೇ ವ್ಯವಸ್ಥೆ ಮತ್ತು ಒಪ್ಪಂದವನ್ನು 12 ಅಂಕೆಗಳ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಹೇಳುತ್ತದೆ.