ಬ್ಲಾಕ್, ವೈಟ್ ಬಳಿಕ ಇದೀಗ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್!
ಇಂದೋರ್ ಜೂ.16 :ಬ್ಲಾಕ್ ಫಂಗಸ್, ವೈಟ್ ಫಂಗಸ್ ಬಳಿಕ ಇದೀಗ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಹಸಿರು ಫಂಗಸ್ ಪತ್ತೆಯಾಗಿರುವ ಸುದ್ದಿಯೊಂದು ಮಾಧ್ಯಮ ದಲ್ಲಿ ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀ ಅರವಿಂದೊ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಎದೆ ರೋಗಗಳ ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ಅವರು, ಕೋವಿಡ್ ಗುಣಮುಖರಾಗಿದ್ದ 34 ವರ್ಷದ ವ್ಯಕ್ತಿಯಲ್ಲಿ ಈ ‘ಹಸಿರು ಶಿಲೀಂಧ್ರ’ (ಗ್ರೀನ್ ಫಂಗಸ್) ಸೋಂಕು ಕಾಣಿಸಿಕೊಂಡಿದೆ. ಸದ್ಯ ರೋಗಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಕೋವಿಡ್ನಿಂದ ಗುಣಮುಖರಾದರೂ ಜ್ವರ ಹಾಗೂ ಮೂಗಿನಿಂದ ರಕ್ತಸ್ರಾವ ಕಾಣಿಸಿಕೊಂಡ ಕಾರಣ ಕಪ್ಪು ಶಿಲೀಂಧ್ರ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಪರೀಕ್ಷೆ ಮಾಡಲಾಯಿತು. ಆದರೆ ಅವರಿಗೆ ‘ಹಸಿರು ಶಿಲೀಂಧ್ರ’ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.