ಅಯೋಧ್ಯೆ ರಾಮಮಂದಿರದ ಭೂಮಿ ಖರೀದಿಗೆ ಸಂಬಂಧಿಸಿದ ವಿವಾದಕ್ಕೆ ಟ್ರಸ್ಟ್ ಸ್ಪಷ್ಟನೆ

ಹೊಸದಿಲ್ಲಿ ಜೂ.15: ಅಯೋಧ್ಯೆ ರಾಮಮಂದಿರದ ಭೂಮಿ ಖರೀದಿಗೆ ಸಂಬಂಧಿಸಿದ ವಿವಾದಕ್ಕೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಟ್ರಸ್ಟ್, ಈ ಜಮೀನು ಅತ್ಯಂತ ಬೆಲೆಬಾಳುವ ಕಾರಣ ಅಧಿಕ ಮೊತ್ತ ನೀಡಿ ಖರೀದಿಸಲಾಗಿದೆ ಎಂದಿದೆ.
ಇನ್ನು ಈ ಬಗ್ಗೆ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ರಾಮಮಂದಿರದ ರಸ್ತೆಗೆ ಸಮೀಪದ ಈ ಜಮೀನು ಅಧಿಕ ಮೌಲ್ಯ ಹೊಂದಿದೆ. ಜಮೀನಿಗೆ ಸಂಬಂಧಿಸಿದ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ. ಇದೇ ವೇಳೆ ಜಮೀನಿನ ಬೆಲೆಯಲ್ಲಿರುವ ವ್ಯತ್ಯಾಸಕ್ಕೆ ಕಾರಣಗಳನ್ನು ವಿವರಿಸಿದ ವರದಿಯಲ್ಲಿ ಕೇಂದ್ರ ಸರಕಾರ, ಬಿಜೆಪಿ ಮತ್ತು ಆರೆಸ್ಸೆಸ್ ಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!