ಮಾಸ್ಕ್‌’ಗೆ ಗುಡ್ ಬಾಯ್ ಹೇಳಿದ ಇಸ್ರೇಲ್‌ !

ಜೆರುಸಲೆಮ್: ಇಸ್ರೇಲ್‌ನಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಸಂಪೂರ್ಣ ಯಶಸ್ವಿಯಾಗಿದ್ದು, ಕೋವಿಡ್‌ ಮಾರ್ಗಸೂಚಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಜನರು ಇನ್ನು ಮುಂದೆ ಒಳಾಂಗಣಗಳಲ್ಲೂ ಮಾಸ್ಕ್‌ ಧರಿಸದೆ ಓಡಾಡ ಬಹುದಾಗಿದೆ.

ಕೋವಿಡ್‌ ನಿರ್ಬಂಧಗಳನ್ನು ದೇಶವು ಮಂಗಳವಾರ ತೆರವುಗೊಳಿಸಿದ್ದು, ಜನರು ವಿಮಾನಗಳಲ್ಲಿ ಮತ್ತು ಇನ್ನಿತರ ಸಂಚಾರ ಮಾರ್ಗಗಳಲ್ಲಿ ಮಾಸ್ಕ್‌ ಧರಿಸಬೇಕಾಗಿದೆ. ಹಾಗೆಯೇ ನರ್ಸಿಂಗ್ ಹೋಂಗಳಲ್ಲಿ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಚಿಕಿತ್ಸೆಗಳಲ್ಲಿರುವವರು ಮಾಸ್ಕ್‌ ಧರಿಸಬೇಕಿದೆ.

ಇಸ್ರೇಲ್ ತನ್ನ ವಯಸ್ಕ ಜನಸಂಖ್ಯೆಯಲ್ಲಿ ಸುಮಾರು ಶೇ 85ರಷ್ಟು ಜನರಿಗೆ ಲಸಿಕೆ ಹಾಕಿದೆ. ಇದರಿಂದಾಗಿ ಶಾಲೆಗಳು ಮತ್ತು ಎಲ್ಲ ವ್ಯವಹಾರಗಳು ಸಂಪೂರ್ಣ ಪುನರಾರಂಭವಾಗಲಿವೆ. 90 ಲಕ್ಷ ಜನಸಂಖ್ಯೆಗೂ ಹೆಚ್ಚಿರುವ ದೇಶದಲ್ಲಿ ಬೆರಳೆಣಿಕೆಯಷ್ಟು ಸಕ್ರಿಯ ರೋಗಿಗಳಿದ್ದಾರೆ.

ಹೊಸ ರೂಪಾಂತರಿ ಕೋವಿಡ್‌ನಿಂದಾಗಿ ದೇಶದ ಹೊರಗಿನಿಂದ ಬರುವವರ ಬಗ್ಗೆ ಅಧಿಕಾರಿಗಳು ಜಾಗ್ರತೆ ವಹಿಸಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ಪ್ರವಾಸಿಗರಿಗೆ ಇಸ್ರೇಲ್ ನಿರ್ಬಂಧ ವಿಧಿಸಿತ್ತು. ದೇಶಕ್ಕೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ಲಸಿಕೆ ಹಾಕಿಸಿಕೊಂಡ ದಾಖಲೆಗಳನ್ನು ಹಾಜರುಪಡಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!