ಸಿಎಂ ಬಿಎಸ್‌ವೈ ವಿರೋಧಿಗಳಿಂದ ‘ಗೋ ಬ್ಯಾಕ್, ಸಿಂಗ್’ ಅಭಿಯಾನ ಸಾಧ್ಯತೆ?
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ದೆಹಲಿಯಿಂದಲೇ ಹೇಳಿಕೆ ನೀಡಿದ್ದಾರೆ. ಆದರೆ ಇದೀಗ ಈ ಕುರಿತಂತೆ ಹೊಸ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದೆ. ಯಡಿಯೂರಪ್ಪ ಅವರ ವಿರೋಧಿಗಳು ಈಗ ಅರುಣ್ ಸಿಂಗ್ ಅವರ ಮೇಲೆ ತಮ್ಮ ಮುನಿಸನ್ನು ಬಹಿರಂಗ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅರುಣ್ ಸಿಂಗ್ ಅವರು ಬುಧವಾರ ರಾಜ್ಯಕ್ಕೆ ಆಗಮಿಸಿದಾಗ, ಅವರು ಶಾಸಕರನ್ನು ಭೇಟಿ ಮಾಡುವ ಮೊದಲು ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊಂದಿರುವ ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದಮತ್ತು ಜಿ.ಎಚ್. ತಿಪ್ಪಾರೆಡ್ಡಿ ಸಚಿವ ಸಿ.ಪಿ. ಯೋಗೇಶ್ವರ, ಸುನಿಲ್ ಕುಮಾರ್ ಅವರನ್ನೊಳಗೊಂಡ ಒಂದು ಗುಂಪು, ಮೊದಲು ಶಾಸಕಾಂಗ ಪಕ್ಷದ ಸಭೆಗೆ ಸಿಂಗ್ ಕರೆ ನೀಡಬೇಕೆಂದು ಒತ್ತಾಯಿಸಬೇಕೆಂಬ ಆಗ್ರಹ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೊದಲು ಸಚಿವರನ್ನು ಭೇಟಿಯಾಗುವುದಾಗಿ ಸಿಂಗ್ ಸೂಚಿಸಿದ್ದರು ಮತ್ತು ಅಗತ್ಯವಿದ್ದರೆ ಶಾಸಕಾಂಗ ಸಭೆ ನಡೆಸಲು ಸಿಂಗ್ ನಡೆಸಬಹುದು ಬಹುದು. ಆದರೆ, ಅಗತ್ಯವಾದರೆ ‘ಗೋ ಬ್ಯಾಕ್, ಅರುಣ್ ಸಿಂಗ್’ ಅಭಿಯಾನವನ್ನು ಪ್ರಾರಂಭಿಸಲು ಸಹ ಸಿಂಗ್ ವಿರೋಧಿ ಬಣ ಸಿದ್ದವಾಗಿದೆ ಎಂಬ ಆತಂಕವಿದೆ.
ಯಡಿಯೂರಪ್ಪ ಅವರು ಇನ್ನೂ ಎರಡು ವರ್ಷಗಳ ಕಾಲ ಸಿಎಂ ಆಗಿ ಉಳಿಯುತ್ತಾರೆ ಎಂದು ಮಾಧ್ಯಮಗಳಿಗೆ ತಿಳಿಸಲು ಸಿಎಂಗೆ ಅಧಿಕಾರ ನೀಡಿದ ಕಾರಣವನ್ನು ಸಿಂಗ್ ಅವರಲ್ಲಿ ಕೇಳಲು ಈ ಗುಂಪು ಬಯಸಿದೆ. ಎನ್ನುವುದಾದಲ್ಲಿ ಈ ಭೇಟಿಯ ಉದ್ದೇಶವೇನು ಎನ್ನುವುದು ಈಗಿನ ಪ್ರಶ್ನೆಯಾಗಿ ಉಳಿದಿದೆ.