ಶಿರ್ವ ‘ಕುಬೇರ್ ಎಂಟರ್ ಪ್ರೈಸಸ್’: ಮಾಸ್ಕ್ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಶಿರ್ವ ಜೂ.13(ಉಡುಪಿ ಟೈಮ್ಸ್ ವರದಿ): ಶಿರ್ವದ ಪ್ರಸಿದ್ಧ ‘ಕುಬೇರ್ ಎಂಟರ್ ಪ್ರೈಸಸ್‘ ವತಿಯಿಂದ ಮಾಸ್ಕ್ ಹಾಗೂ ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ಆಹಾರ ಸಾಮಾಗ್ರಿಗಳ ರೇಷನ್ ಕಿಟ್ ವಿತರಿಸಲಾಯಿತು.

ಶಿರ್ವ ಪಂಚಾಯತ್ ನ ಪರಿಸರದಲ್ಲಿ ಮಾಸ್ಕ್ ವಿತರಣೆ ಮಾಡಲಾಗಿದ್ದು, ಸರಕಾರಿ ಆಸ್ಪತ್ರೆ, ವೈದ್ಯರು, ಮೆಸ್ಕಾಂ ಸಿಬ್ಬಂದಿ, ಶಿರ್ವ ಪೊಲೀಸ್ ಸಿಬ್ಬಂದಿ ಮತ್ತು ಆಶಾಕಾರ್ಯಕರ್ತೆಯರಿಗೆ ಮಾಸ್ಕ್ ವಿತರಣೆ ಮಾಡಲಾಯಿತು.ಹಾಗೂ ಇದೇ ವೇಳೆ ಸುಮಾರು 60ಕ್ಕೂ ಅಧಿಕ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕುಬೇರ್ ಎಂಟರ್ಪ್ರೈಸಸ್ ನ ಮಾಲಕರಾದ ಹರಿಪ್ರಸಾದ್ ಮತ್ತು ಸುಜನ್, ಸುರೇಶ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!