| ಬೆಂಗಳೂರು,ಜೂ.14: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಶ್ರವಣ್, ಯುವತಿಗೆ ಸ್ಟಿಂಗ್ ಕ್ಯಾಮೆರಾ ಕೊಡಿಸಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾನೆ ಎಂಬ ಸ್ಪೋಟಕ ಮಾಹಿತಿಯೊಂದು ವರದಿಯಾಗಿದೆ.
ಪ್ರಕರಣದ ವಿಚಾರಣೆ ಸಂಬಂಧಿಸಿದಂತೆ ಶಂಕಿತ ಯುವಕರ ವಿಚಾರಣೆ ನಡೆಯುತ್ತಿದ್ದು, ನರೇಶ್ ಮತ್ತು ಶ್ರವಣ್ ಎಸ್ಐಟಿ ಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಶ್ರವಣ್ ಸ್ಟಿಂಗ್ ಕ್ಯಾಮೆರಾ ಕೊಡಿಸಿರುವ ವಿಚಾರ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಇನ್ನು ಪೊಲೀಸ್ ವಿಚಾರಣೆ ವೇಳೆ ಶ್ರವಣ್ ಇನ್ನಷ್ಟು ಮಾಹಿತಿ ನೀಡಿದ್ದು,ಅದರಂತೆ ಸ್ಟಿಂಗ್ ಆದ ನಂತರ ಯುವತಿ ತನಗೆ ಕಾಲ್ ಮಾಡಿದ್ದು ನಿಜ. ಸ್ಟಿಂಗ್ ಕ್ಯಾಮೆರಾದಲ್ಲಿ ವೀಡಿಯೋ ಆಗುವ ಮೊದಲೆ ರಾಸಲೀಲೆ ವಿಡಿಯೋ ಆಗಿತ್ತಂತೆ. ಸದ್ಯ ವೈರಲ್ ವೀಡಿಯೋದಲ್ಲೂ ಜಾರಕಿಹೊಳಿ ಯುವತಿಗೆ ವಿಡಿಯೋ ಮಾಡುವಂತೆ ಹೇಳ್ತಾರೆ ಕೇಳಿ ಎಂದು ಎಸ್ಐಟಿಗೆ ಹೇಳಿದ್ದಾನೆ. ಅಲ್ಲದೆ ಆ ವೀಡಿಯೋ ಜಾರಕಿಹೊಳಿ ಮೊಬೈಲ್ ನಲ್ಲಿದೆ, ಬೇಕಿದ್ರೆ ಚೆಕ್ ಮಾಡಿ. ಯುವತಿಗೆ ಬಲವಂತವಾಗಿ ಮತ್ತು ಬೆದರಸಿ ಲೈಂಗಿಕ ಸಂಪರ್ಕ ಬೆಳಸಿದ್ದಾರೆ. ವೈರಲ್ ಆಗಿರೋ ವೀಡಿಯೋ ಬಿಟ್ಟು ಬೇರೆ ಯುವತಿಯರ ಜೊತೆಗಿರೋ ವಿಡಿಯೋ ಸಹ ಜಾರಕಿಹೊಳಿ ಮೊಬೈಲ್ ನಲ್ಲಿದೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ದಾಳೆ. ಆಕೆಗೆ ಅವಾಚ್ಯ ವಾಗಿ ಬೈದು ಕಿರುಕುಳ ಕೊಡ್ತಿದ್ದಾಗಿ ಯುವತಿ ಹೇಳಿದ್ರಿಂದ ಸ್ಟಿಂಗ್ ಮಾಡೋಕೆ ಹೇಳಿದ್ದೀವಿ. ಆದ್ರೆ ವೀಡಿಯೋ ಆದ್ಮೇಲೆ ನಾವು ನೋಡಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲಿತ್ತು. ಯುವತಿ ಮನೆಗೂ ಜಾರಕಿಹೊಳಿ ಕಡೆಯವರು ಬಂದು ಹೋಗಿದ್ದಾರೆ ಎಂದು ಶ್ರವಣ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ.
ಇದರೊಂದಿಗೆ, ವೀಡಿಯೋ ನಂತರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿ ಎಂದು ತಿಳಿಸಲಾಗಿತ್ತು. ಆದ್ರೆ ಯುವತಿ ಹೆದರಿ ದೂರು ನೀಡಲು ಹಿಂದೇಟು ಹಾಕಿದ್ದರು. ಸಿಡಿ ವೈರಲ್ ಆದ ದಿನ ಕೂಡ ಯುವತಿಗೆ ಜಾರಕಿಹೊಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ರು. ನಿನ್ನ ಹಾಗೂ ನಿನಗೆ ಸಪೋರ್ಟ್ ಮಾಡಿದವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಆದ್ದರಿಂದ ಜೀವ ಭಯದಿಂದ ನಾವೂ ಊರು ಬಿಡಬೇಕಾಯಿತು ಎಂದು ಎಸಿಪಿ ಧರ್ಮೇಂದ್ರ ಅವರ ಮುಂದೆ ಶ್ರವಣ್ ಹೇಳಿಕೆ ನೀಡಿರೋದಾಗಿ ಮಾಧ್ಯಮದಲ್ಲಿ ವರದಿಯಾಗಿದೆ
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಂದು ಬೆಳಿಗ್ಗೆ 11 ಗಂಟೆ ವಿಚಾರಣೆಗೆ ಹಾಜರಾಗುವಂತೆ ನರೇಶ್ ಗೆ ನೋಟಿಸ್ ನೀಡಿದ್ದು, ಶ್ರವಣ್ ಗೆ ನಾಳೆ ಬೆಳಿಗ್ಗೆ11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. | |