17 ವರ್ಷದ ಬಾಲಕಿಯನ್ನು ಮದುವೆಯಾದ ಯುವತಿಯ ಬಂಧನ
ಗುನಾ: ಮಧ್ಯಪ್ರದೇಶದ ಗುನಾದಲ್ಲಿ 17 ವರ್ಷದ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ 20 ವರ್ಷದ ಯುವತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬುದೇ ಬಾಲಾಜಿ ಪ್ರದೇಶದಲ್ಲಿರುವ ನಿವಾಸಿಯೊಬ್ಬರು 17 ವರ್ಷದ ಪುತ್ರಿ ಕಾಣೆಯಾಗಿರುವ ಕೊತ್ವಾಲಿ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.