ನನ್ನನ್ನು ಕೂಡಾ ಬಂಧಿಸಿ- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ ಮೇ.16: “ನನ್ನನ್ನು ಕೂಡಾ ಬಂಧಿಸಿ” ಹೀಗೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್  ಮಾಡಿದ್ದಾರೆ. ಇದಕ್ಕೆ ಕಾರಣ, ದೆಹಲಿ ನಗರದ ಗೋಡೆಗಳ ಮೇಲೆ ಕಂಡುಬಂದ ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..? ಎಂಬ ಗೋಡೆ ಬರಹಗಳ ಪ್ರಕರಣಕ್ಕೆ ಸಂಬಂಧಿಸಿ, ತನಿಖೆ ನಡೆಸಿದ ದೆಹಲಿ ಪೊಲೀಸರು 17 ಜನರನ್ನು ಬಂಧಿಸಿ ಅವರ ವಿರುದ್ಧವಾಗಿ 21 ಕೇಸ್‍ಗಳನ್ನು ದಾಖಲಿಸಿರುವುದು. 

ಇದೀಗ ಈ ವಿಚಾರಕ್ಕೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಅವರು, ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನ ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..? ಎಂಬ ಬರಹವಿರುವ ಫೋಟೋವನ್ನು ಹಂಚಿಕೊಂಡು ನನ್ನನ್ನು ಕೂಡಾ ಬಂಧಿಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ನಡುವೆ  ಇದೆ ಬರಹವಿರುವ ಫೋಟೋವನ್ನು ರಾಷ್ಟ್ರೀಯ ಕಾಂಗ್ರೆಸ್‍ನ ಅಧಿಕೃತ ಟ್ವೀಟ್ಟರ್ ಖಾತೆ ಪ್ರೋಫೈಲ್ ಫೋಟೋವನ್ನಾಗಿ ಬದಲಿಸಿ ಕೊಂಡಿರುವುದು ಕಂಡು ಬಂದಿದೆ.

Leave a Reply

Your email address will not be published. Required fields are marked *

error: Content is protected !!