ಮೂಡಬಿದ್ರೆ: ಅನಿಝ್ ಶೇಕ್ ನಿಧನ
ಉಡುಪಿ, ಮೇ 13: ಮಂಗಳೂರಿನ ಬೋಳಾರ ನಿವಾಸಿ ಗುಲಾಮ್ ಮೊಹಮ್ಮದ್ ಮೂಡಬಿದ್ರಿ ಎಂಬವರ ಪುತ್ರ ಮೊಹಮ್ಮದ್ ಅನಿಝ್ ಶೇಕ್ (48) ಅವರು ಉಡುಪಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇವರು ಇಂದ್ರಾಳಿಯ ನಿಸಾರ್ ಅಹ್ಮದ್ ಅವರ ಅಳಿಯರಾಗಿದ್ದು, ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಎಲ್ಲರೊಂದಿಗೆ ಉತ್ತಮ ಹಾಗೂ ಸೌಹಾರ್ದಮಯ ಒಡನಾಟ, ಸಾಮಾಜಿಕ ಕಳಕಳಿ ಹೊಂದಿದ್ದವರಾಗಿದ್ದರು. ಇವರ ಅಂತ್ಯಕ್ರಿಯೆಯು ಇಂದು ಇಂದ್ರಾಳಿಯ ನೂರಾಣಿ ಮಸೀದಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.