ಉಡುಪಿ: ಫ್ಲಾಟ್ ಮಾರಾಟ ಮಾಡಿ ಪಾಲುದಾರರಿಗೆ ವಂಚನೆ- ದೂರು ದಾಖಲು
ಉಡುಪಿ ಮೇ.13 (ಉಡುಪಿ ಟೈಮ್ಸ್ ವರದಿ): ವ್ಯವಹಾರದಲ್ಲಿನ ಲಾಭದ ಹಂಚಿಕೆ ವಿಚಾರದಲ್ಲಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಈ ಬಗ್ಗೆ ಬ್ರಹ್ಮಗಿರಿಯ ಬಿ ಪ್ರೇಮಾನಂದ ಶೆಟ್ಟಿ ಅವರು ಸುಧೀರ್ ಆಚಾರ್ಯ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಬಿ ಪ್ರೇಮಾನಂದ ಶೆಟ್ಟಿ , ಜಯರಾಮ್ ಶೆಟ್ಟಿ ಮತ್ತು ಆರೋಪಿ ಸುಧೀರ್ ಆಚಾರ್ಯ ಸೇರಿ M/S NIREL ಎಂಬ ಪಾಲುದಾರಿಕೆ ಸಂಸ್ಥೆಯನ್ನು ಆರಂಭಿಸಿದ್ದರು. ಮಾ.18 ರಂದು ಪ್ರೇಮಾನಂದ ಶೆಟ್ಟಿ ಹಾಗೂ ಜಯರಾಮ್ ಶೆಟ್ಟಿರವರು ಬಡಗಬೆಟ್ಟು ಗ್ರಾಮದಲ್ಲಿ 18 ಸೆಂಟ್ಸ್ ಸ್ಥಿರಾಸ್ತಿಯನ್ನು ತ್ಯಾಗರಾಜ್ ಎಂಬವರಿಂದ ಖರೀದಿ ಮಾಡಿಕೊಂಡಿದ್ದರು.
ಈ ಸ್ಥಿರಾಸ್ತಿಯಲ್ಲಿ ಆರೋಪಿ ಸುಧೀರ್ ಆಚಾರ್ಯ ಫ್ಲ್ಯಾಟ್ ಗಳನ್ನು ನಿರ್ಮಿಸಿ, ಮಾರಾಟ ಮಾಡಿ ಅದರಿಂದ ಬಂದ ಲಾಭವನ್ನು ಹಂಚಿಕೊಳ್ಳುವ ಎಂದು ಪ್ರೇಮಾನಂದ ಅವರನ್ನು ನಂಬಿಸಿದ್ದಾನೆ. ಆರೋಪಿ ಸುಧೀರ್ ಆಚಾರ್ಯ ಸ್ಥಿರಾಸ್ತಿಯಲ್ಲಿ ಫ್ಲ್ಯಾಟ್ ಗಳನ್ನು ನಿರ್ಮಿಸಿ ಮಾರಾಟ ಮಾಡಿ ಅದರಲ್ಲಿ ಬಂದಂತಹ ಲಾಭವನ್ನು ಪಾಲುದಾರರಿಗೆ ನೀಡದೇ ವಂಚಿಸಿದ್ದು, ಅಲ್ಲದೆ ಇವರು ಹಣ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ