ಪ್ರಧಾನಿ ಮೋದಿಯವರ ಜನಪ್ರಿಯತೆಯಲ್ಲಿ ತೀವ್ರ ಕುಸಿತ

ಹೊಸದಿಲ್ಲಿ ಮೇ.9: ಪ್ರಪಂಚದ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಒಬ್ಬರಾಗಿದ್ದರು. ಇದೀಗ ದೇಶದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ಕುಸಿತ ಕಂಡಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಅಮೆರಿಕದ ಮಾರ್ನಿಂಗ್‌ ಕನ್ಸಲ್ಟ್‌ ಕೈಗೊಂಡಿರುವ ಜನಪ್ರಿಯತೆ ಸೂಚ್ಯಂಕದ ಆಧಾರದಲ್ಲಿFinancial Times Asia ವರದಿ ಮಾಡಿದ್ದು, ದೇಶದಾದ್ಯಂತ ಕೋವಿಡ್‌ ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ತಿಳಿಸಿದೆ. ಮಾರ್ಚ್‌ ಕೊನೆಯ ವಾರದಲ್ಲಿ 74 ಶೇ.ದಷ್ಟು ಇದ್ದ ಪ್ರಧಾನಿ ಅವರ ಜನಪ್ರಿಯತೆ ಸೂಚ್ಯಂಕವು ಮೇ 4ರ ವೇಳೆಗೆ 65 ಶೇ. ಕ್ಕೆ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

2019ರಿಂದ ಈ ಏಜೆನ್ಸಿಯು ಜನಪ್ರಿಯತೆ ಸೂಚ್ಯಂಕ ಪ್ರಾರಂಭಿಸಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ಮೋದಿಯವರ ಜನಪ್ರಿಯತೆಯು ಈ ಮಟ್ಟಕ್ಕೆ ಕುಸಿತ ಕಂಡಿದೆ. ಇದರೊಂದಿಗೆ ಪ್ರಧಾನಿ ಮೋದಿಯೊಂದಿಗಿನ ಅಸಮ್ಮತಿ ರೇಟಿಂಗ್‌ ಕೂಡಾ 20 ಶೇ.ದಿಂದ 29 ಶೇ.ದವರೆಗೆ ಹೆಚ್ಚಾಗಿದೆ ಎಂದು 

ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಸೌತ್‌ ಏಶ್ಯನ್‌ ಸ್ಟಡೀಸ್‌ ಸಿಂಗಾಪೂರ್‌ ನ ಹಿರಿಯ ಸಂಶೋಧನಾ ತಜ್ಞ ರೊನೋಜಾಯ್‌ ಸೇನ್‌ ಅವರು ತಮ್ಮ ಹೇಳಿಕೆಯೊಂದರಲ್ಲಿ “ಜನರ ಗ್ರಹಿಕೆ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮವಾಗಿದ್ದರು. ಜನರಿಗೆ ಸಂದೇಶ ನೀಡುವಿಕೆಯಲ್ಲೂ ಅವರು ಮುಂದಿದ್ದರು. ಆದರೆ ಕೋವಿಡ್‌ ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಅದರಲ್ಲೂ ವಿಫಲರಾಗಿದ್ದಾರೆ” ಎಂದು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!