ಸರ್ಕಾರದ ಶಿಫಾರಸ್ಸಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಲಭ್ಯ- ಉಡುಪಿ ಡಿಸಿ

ಉಡುಪಿ: ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದರೆ ಆಯುಷ್ಮಾನ್ ಭಾರತ್ ಯೋಜನೆಯನ ಉಪಯೋಗ ಪಡೆಯಲು ಸಾಧ್ಯವಿಲ್ಲ. ಸರ್ಕಾರದ ಶಿಫಾರಸ್ಸಿನ ಮೇರೆಗೆ ಅಂದರೆ ಸರ್ಕಾರಿ ಕಾಲ್ ಸೆಂಟರ್ ಮೂಲಕ ಹೋದರೆ ಮಾತ್ರ ಸೌಲಭ್ಯ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ, ಎಂದು ಡಿಸಿ ಜಗದೀಶ್ ಸ್ಪಷ್ಟಪಡಿಸಿದರು.

ಶನಿವಾರ ಮೇ 8 ರಂದು ಕೋವಿಡ್ – 19 ಸಂಬಂಧ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು. ಯಾರಿಗೆ ಇಂತಹದ್ದೇ ಖಾಸಗಿ ಆಸ್ಪತ್ರೆ ಬೇಕು ಅಂತಿದ್ದರೆ ನೇರವಾಗಿ ದಾಖಲಾತಿ ಮಾಡಿಕೊಂಡವರಿಗೆ ಅವರ ಚಿಕಿತ್ಸೆ ಬಿಲ್ ನ್ನು ಅವರೇ ಪಾವತಿಸಬೇಕಾಗುತ್ತದೆ. ಸರಕಾರಿ ಕೋಟದಡಿ ಪ್ರಯೋಜನ ಸಿಗಲ್ಲ. ಇದರ ಬಗ್ಗೆ ಜನರಿಗೆ ಸಾಕಷ್ಟು ಗೊಂದಲವಿದೆ, ಎಂದು ಅವರು ತಿಳಿಸಿದರು.

ಮಣಿಪಾಲದಲ್ಲಿ 300 ಬೆಡ್ಸ್ ಗಳ ಕೋವಿಡ್ ಕೇರ್ ಆರಂಭ :ನೂತನವಾಗಿ ಖಾಸಗಿ ಸಂಸ್ಥೆ ಯಲ್ಲಿ ಆರಂಭವಾದ ಕೋವಿಡ್ ಕೇರ್ ಸೆಂಟರ್ ಬಗ್ಗೆ ಮಾತನಾಡಿದ ಶಾಸಕ ರಘುಪತಿ ಭಟ್, ಈಗಾಗಲೇ ಮಣಿಪಾಲದ ಎಮ್ ಐಟಿ‌ ಹಾಸ್ಟೆಲ್ ನಲ್ಲಿ 50 ಬೆಡ್ಸ್ ಸೌಲಭ್ಯ ಇರುವ ತಜ್ಞ ವೈದ್ಯರ ಸೌಲಭ್ಯ ಇರುವ ಕೋವಿಡ್ ಕೇರ್ ಸೆಂಟರ್ ಆರಂಭವಾಗಿದೆ. ಮುಂದೆ 300 ಬೆಡ್ಸ್ ನಷ್ಟು ಹೆಚ್ಚಿಸುವ ಅವಕಾಶವಿದೆ. ಅಗತ್ಯ ಬಿದ್ದರೆ ಇನ್ನಷ್ಟು ಹೆಚ್ಚಿಸುವ ಯೋಜನೆ ಇದೆ. ಕುಂದಾಪುರದ ದೇವರಾಜ್ ಅರಸ್ ಹಾಸ್ಟೆಲ್ ನಲ್ಲಿ 75 ಬೆಡ್ಸ್ , ಕಾರ್ಕಳದಲ್ಲಿ ‌ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ 60 ಬೆಡ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. ಯಾರಿಗೆ ಕೋವಿಡ್ ಲಕ್ಷಣ ಇಲ್ಲದೆ ಶಂಕಿತರರಿರುತ್ತಾರೋ, ಆಕ್ಸಿಜನ್, ಔಷಧಿಯ ಅವಶ್ಯಕತೆ ಇರುವುದಿಲ್ಲವೋ ಮನೆಯಲ್ಲಿ ಐಸೋಲೇಟ್ ಆಗಿರಲು ಅಸಾಧ್ಯ ಆಗಿರುತ್ತದೋ ಅವರು ಈ‌ ಸೆಂಟರ್ ಪ್ರಯೋಜನ ‌ಪಡೆಯಬಹುದು. ಆದರೆ ಸರಕಾರಿ ಕಾಲ್ ಸೆಂಟರ್ ಮೂಲಕವೇ ಇದನ್ನು ಪಡೆದು ಕೊಳ್ಳಬೇಕು” ಎಂದು ತಿಳಿಸಿದರು.

ಇನ್ನು ಬಡವರು ಆಯುಷ್ಮಾನ್ ಭಾರತ್ ನಡಿಯಲ್ಲಿ ಚಿಕಿತ್ಸೆ ಪಡೆಯವಲ್ಲಿ ಗೊಂದಲವಿದೆ. ಈಗಾಗಲೇ ಸರಕಾರಿ ಆಸ್ಪತ್ರೆ ಯಲ್ಲಿ ಬೆಡ್ಸ್ ಗಳು ಭರ್ತಿಯಾಗಿದ್ದು, ಕಾಲ್ ಸೆಂಟರ್ ಮೂಲಕ ಖಾಸಗಿ ಆಸ್ಪತ್ರೆಗೆ ಹೋದರೆ ಎಬಿಆರ್ ಕೆಯ ಪ್ರಯೋಜನ ಪಡೆಯಬಹುದು. ಈ ವಿಷಯದ ಬಗ್ಗೆ ಶಾಸಕ ಕೆ. ರಘುಪತಿ ಭಟ್ ಅವರು ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಬಡ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಯುಷ್ಮಾನ್ ಯೋಜನೆಯಡಿ ಪರಿಗಣಿಸಿ ಉಚಿತ ಚಿಕಿತ್ಸೆ ನೀಡುವ ಬಗ್ಗೆ ನಿರ್ಣಯಿಸಿ ಡಾ. ಪ್ರೇಮಾನಂದ್ ಅವರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ.

ಕೊರೋನಾ ಸೋಂಕು ದೃಢಪಟ್ಟ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇದ್ದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದರೆ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಮೊದಲು ಅಥವಾ ದಾಖಲಾದ ತಕ್ಷಣ ಕೋವಿಡ್ ಕಾಲ್ ಸೆಂಟರ್ ನಂಬರ್ 9663957222, 9663950222, 8867054104, 8792042104)ಗೆ ಫೋನ್ ಮಾಡಿ ಅಲ್ಲಿಂದ ಶಿಫಾರಸ್ಸು ಪಡೆದು ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!