ಕೋವಿಡ್ ಸೋಂಕಿತನ ಸ್ಥಳಾಂತರಗೊಳಿಸಲು ರೂ.1ಲಕ್ಷ ಬೇಡಿಕೆ ಇಟ್ಟ ವೈದ್ಯನ ಬಂಧನ
ನವದೆಹಲಿ ಮೇ.8: ಕೋವಿಡ್ ಸೋಂಕಿತರನ್ನು ಗುರುಗ್ರಾಮದಿಂದ ಲುಧಿಯಾನಾಗೆ ಸ್ಥಳಾಂತರಗೊಳಿಸಲು 1ಲಕ್ಷ ಬೇಡಿಕೆ ಇಟ್ಟಿದ್ದ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇಂದರ್ ಪುರಿಯ ದಶಗಢ್ ಗ್ರಾಮದ ನಿವಾಸಿ ಅಂಬ್ಯುಲೆನ್ಸ್ ಮಾಲೀಕ ಎಂಬಿಬಿಎಸ್ ವೈದ್ಯ ಮಿಮೋಹ್ ಕುಮಾರ್ ಬುಂಡ್ವಾಲ್ ಬಂಧಿತ ಆರೋಪಿ. ಈ ಬಗ್ಗೆ ರೋಗಿಯ ಮಗಳು ಆರೋಪಿಸಿದ್ದು, ಅಂಬುಲೆನ್ಸ್ ಹುಡುಕಲು ಸಾಧ್ಯವಾಗದ ಕಾರಣ, ದೆಹಲಿ ಮೂಲದ ಆಪರೇಟರ್ರನ್ನು ಸಂಪರ್ಕಿಸಿದೇವು. ಆಪರೇಟರ್ಗಳು ಆರಂಭದಲ್ಲಿ 1.40 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟರು. ನಂತರ ಅವರು 20,000 ಕಡಿತಗೊಳಿಸಿ, ಅವರ ಬಳಿ ಆಕ್ಸಿಜನ್ ಸ್ಟಾಕ್ ಇದ್ದಿದ್ದರಿಂದ ಹಣ ನೀಡಲು ಕುಟುಂಬಸ್ಥರು ಒಪ್ಪಿಕೊಂಡಿರುದಾಗಿ ತಿಳಿಸಿದ್ದಾರೆ. ಅಂಬುಲೆನ್ಸ್ ಆಪರೇಟರ್ಗಳಿಗೆ ಮುಂಗಡವಾಗಿ 95,000 ಮೊತ್ತವನ್ನು ಪಾವತಿಸಲಾಗಿದ್ದು, ಉಳಿದ 25,000 ರೂ. ವನ್ನು ಲುಧಿಯಾನಕ್ಕೆ ತಲುಪಿದ ಕೂಡಲೇ ಪಾವತಿಸಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಉಪ ಪೊಲೀಸ್ ಆಯುಕ್ತ ಉರ್ವಿಜಾ ಗೋಯಲ್ ಅವರು, ಇಂದರ್ಪುರಿಯ ದಶಗಢ ಗ್ರಾಮದಲ್ಲಿರುವ ಕಾರ್ಡಿಕೇರ್ ಅಂಬುಲೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅಂಬುಲೆನ್ಸ್ ಸೇವೆಗಳನ್ನು ಒದಗಿಸುತ್ತಿದ್ದು, ಸೋಂಕಿತರ ಬಳಿ ಹಣ ಲೂಟಿ ಮಾಡುತ್ತಿದೆ ಎಂದು ಮಾಹಿತಿ ಬಂದಿತು. ಈ ಬಗ್ಗೆ ತನಿಖೆ ನಡೆಸಿ, ಅಂಬುಲೆನ್ಸ್ ಸೇವೆ ಒದಗಿಸುತ್ತಿದ್ದ ಕಂಪನಿಯನ್ನು ಬುಂಡ್ವಾಲ್ನನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ಇಂದರ್ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.