ಐಪಿಎಲ್ ಮುಂದೂಡಿಕೆ: ಬಿಸಿಸಿಐಗೆ ಬರೋಬ್ಬರಿ 2,000 ಕೋಟಿ ನಷ್ಟ!

ನವದೆಹಲಿ: ಬಯೋ-ಬಬಲ್ ನಲ್ಲಿದ್ದರೂ ಐಪಿಎಲ್ ಆಟಗಾರರಿಗೆ ಕೊರೋನಾ ವಕ್ಕರಿಸಿದ್ದರಿಂದ ಅನಿವಾರ್ಯವಾಗಿ ಈ ಬಾರಿಯ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು ಇದರಿಂದಾಗಿ ಈ ವರ್ಷದ ಲೀಗ್‌ಗೆ ಮೀಸಲಿಟ್ಟಿರುವ ಪ್ರಸಾರ ಮತ್ತು ಪ್ರಾಯೋಜಕತ್ವದ ಹಣದ 2000 ಕೋಟಿ ರೂ.ಗಳನ್ನು ಬಿಸಿಸಿಐ ಕಳೆದುಕೊಳ್ಳಲಿದೆ. 

ಕಳೆದ ಒಂದೆರಡು ದಿನಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಲ್ಲಿ ಕೊರೋನಾ ವಕ್ಕರಿಸಿದ್ದರಿಂದ ಐಪಿಎಲ್ ಅನ್ನು ಬಿಸಿಸಿಐ ಮುಂದೂಡಬೇಕಾಯಿತು.

ಈ ಋತುವಿನ ಟೂರ್ನಿಯನ್ನು ಅರ್ಧಕ್ಕೆ ಮುಂದೂಡಿಕೆಯಿಂದಾಗಿ ನಾವು 2,000ರಿಂದ 2,500 ಕೋಟಿ ರೂ.ಗಳವರೆಗೆ ಕಳೆದುಕೊಳ್ಳುವ ಸಾಧ್ಯತೆ ಇದ್ದು, ನಿಖರವಾಗಿ ಅಂದಾಜು ಮಾಡಿ ಹೇಳಬೇಕೆಂದರೆ 2,200 ಕೋಟಿ ರುಪಾಯಿ ಎಂದು ಹೇಳಬಹುದು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಅನಾಮಧೇಯತೆಯ ಪರಿಸ್ಥಿತಿಗಳ ಬಗ್ಗೆ ತಿಳಿಸಿದ್ದಾರೆ .

52 ದಿನಗಳ 60 ಪಂದ್ಯಗಳ ಐಪಿಎಲ್ ಟೂರ್ನಿ ಮೇ 30 ರಂದು ಅಹಮದಾಬಾದ್‌ನಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಕೊರೋನಾದ ನಡುವೆಯೂ 24 ದಿನಗಳ ಕಾಲ 29 ಪಂದ್ಯಗಳು ಮಾತ್ರ ಪೂರ್ಣಗೊಂಡಿದೆ.

ಪಂದ್ಯಾವಳಿಯ ಪ್ರಸಾರ ಹಕ್ಕುಗಳಿಗಾಗಿ ಸ್ಟಾರ್ ಸ್ಪೋರ್ಟ್ಸ್‌ನಿಂದ ಬಿಸಿಸಿಐ ದೊಡ್ಡ ಮೊತ್ತದಲ್ಲಿ ಹಣ ಸಂದಾಯವಾಗುತ್ತಿದ್ದು ಇದಕ್ಕೆ ಕೊಕ್ಕೆ ಬಿದ್ದಿದೆ. ಸ್ಟಾರ್ ಸ್ಪೋರ್ಟ್ ನೊಂದಿಗೆ ಐದು ವರ್ಷಗಳಿಗೆ 16,347 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದರೆ ಪ್ರತಿ ಋತುವಿನ 60 ಪಂದ್ಯಗಳಿಗೆ 3269.4 ಕೋಟಿ ರೂಪಾಯಿ ಆಗಲಿದೆ. 

ಪ್ರತಿ ಪಂದ್ಯದ ಮೌಲ್ಯವು ಅಂದಾಜು 54.5 ಕೋಟಿ ರೂ. ಆಗಲಿದೆ. 29 ಪಂದ್ಯಗಳ ಮೊತ್ತವು 1580 ಕೋಟಿ ರೂ. ಆಗಿದ್ದು, ಪೂರ್ಣ ಪಂದ್ಯಾವಳಿಗಾಗಿ 3270 ಕೋಟಿ ರೂಪಾಯಿ ಆಗುತ್ತಿತ್ತು. ಇನ್ನು 31 ಪಂದ್ಯಗಳು ಬಾಕಿ ಇರುವುದರಿಂದ ಅರ್ಧಕ್ಕೆ ಅರ್ಧ ಮೊತ್ತ ಕಡಿಮೆಯಾಗಲಿದೆ. 

ಅಂತೆಯೇ, ಮೊಬೈಲ್ ತಯಾರಕ ವಿವೋ ಸಂಸ್ಧೆ, ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕರಾಗಿ, ಪ್ರತಿ ಟೂರ್ನಿಗೆ 440 ಕೋಟಿ ರೂ. ಪಾವತಿಸುತ್ತಾರೆ. ಟೂರ್ನಿ ಮುಂದೂಡುವಿಕೆಯಿಂದಾಗಿ ಆ ಮೊತ್ತದ ಅರ್ಧಕ್ಕಿಂತ ಕಡಿಮೆ ಮೊತ್ತವನ್ನು ಬಿಸಿಸಿಐ ಪಡೆಯುವ ಸಾಧ್ಯತೆಯಿದೆ. ಸಹಾಯಕ ಪ್ರಾಯೋಜಕ ಕಂಪನಿಗಳಾದ ಅನಾಕಾಡೆಮಿ, ಡ್ರೀಮ್ 11, ಸಿಆರ್ಇಡಿ, ಅಪ್‌ಸ್ಟಾಕ್ಸ್, ಮತ್ತು ಟಾಟಾ ಮೋಟಾರ್ಸ್, ತಲಾ 120 ಕೋಟಿ ರೂ. ಕೆಲವು ಅಂಗಸಂಸ್ಥೆ ಪ್ರಾಯೋಜಕರು ಸಹ ಇದ್ದಾರೆ. ಎಲ್ಲಾ ಪಾವತಿಗಳನ್ನು ಅರ್ಧ ಅಥವಾ ಸ್ವಲ್ಪ ಕಡಿಮೆ ಮಾಡಿ ನೋಡಿದರೆ ಬಿಸಿಸಿಐಗೆ 2200 ಕೋಟಿ ರೂ. ನಷ್ಟವಾಗಲಿದೆ ಎಂದರು

Leave a Reply

Your email address will not be published. Required fields are marked *

error: Content is protected !!