ಉಡುಪಿ: ನಿವೃತ್ತ ಎಎಸೈ ತಿಮ್ಮಪ್ಪ ಗೌಡ ನಿಧನ
ಉಡುಪಿ: ಇಲ್ಲಿನ ಅಂಬಾಗಿಲು ನಿವಾಸಿ, ಡಿವೈಎಸ್ಪಿ ಕಚೇರಿಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ತಿಮ್ಮಪ್ಪ ಗೌಡ (66) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತಿಮ್ಮಪ್ಪ ಗೌಡ ಇವರು ಮಣಿಪಾಲ, ಬೈಂದೂರು, ಶಿರ್ವ, ಮಲ್ಪೆ, ಮಂಗಳೂರಿನ ಸಂಚಾರಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ, ಕಾಪು ಠಾಣೆಯ ಕಾನ್ಸ್ಟೇಬಲ್ ಮೋಹನ್ಚಂದ್ರ, ಸಹಿತ ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.