ಕಾಪು: ಪರಿಸರದ ಬಡಜನರಿಗೆ ಸಮಾಜ ಸೇವಾ ವೇದಿಕೆಯಿಂದ ಆಹಾರ ಕಿಟ್ ವಿತರಣೆ

ಕಾಪು: ಪರಿಸರದ ವಸತಿರಹಿತ ನಿರ್ಗತಿಕರಿಗೆ ಹಾಗೂ ಇತರ ಜನರಿಗೆ ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಆಶ್ರಯದಲ್ಲಿ ವೇದಿಕೆ ಕೋಶಾಧಿಕಾರಿ ಸಾಹಿಲ್ ಫೇಬ್ರಿಕೇಶನ್ ಮಾಲಕ ಮೊಹಮ್ಮದ್ ಸಾದಿಕ್ ಕಾಪು ಇವರಿಂದ 80 ಜನರಿಗೂ ಮಿಕ್ಕಿ ಸುಮಾರು 10 ದಿನಕ್ಕೆ ಬೇಕಾಗುವ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಸಾದಿಕ್ ಇವರು ಚಾಲನೆ ನೀಡಿದರು.

 ಕಳೆದ ಕೊರೋನ 1ನೇ ಅಲೆಯ ಸಮಯದಲ್ಲಿ ಸಮಾಜ ಸೇವಾ ವೇದಿಕೆ ತಂಡವು ಮೊಹಮ್ಮದ್ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಸುಮಾರು 3000 ಮನೆಗೂ ಮಿಕ್ಕಿ ಕಿಟ್ ವಿತರಿಸಲಾಗಿತ್ತು.

ಈ ಸಂದರ್ಭದಲ್ಲಿ ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಮಾತನಾಡಿ ಇದ್ದದನ್ನು ಹಂಚಿ ತಿನ್ನುವುದು ನಮ್ಮ ದೇಶದ ಸಂಸ್ಕೃತಿ. ದೇವರು ಎಲ್ಲರಿಗೂ ಒಳ್ಳೇದು ಮಾಡಲಿ ಕೊರೋನ ರೋಗ ಬಂದಾಗ ಯಾರು ದೃತಿ ಕೆಡದೆ ಸರಕಾರದ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದರು.

ಉಡುಪಿ ಜಿಲ್ಲಾ ಜೆ ಡಿ ಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಶರ್ಫುದ್ದಿನ್ ಶೇಖ್, ಮಜೂರು ವೇದಿಕೆ ಗೌರಧ್ಯಕ್ಷರಾದ ದಿವಾಕರ ಬಿ. ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಗೌರವ ಸಲಹೆಗರಾರದ ದಯಾನಂದ ಕೆ ಶೆಟ್ಟಿ ದೆಂದೂರು, ಪ್ರ.ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಕಾರ್ಯದರ್ಶಿ ಶಂಶುದ್ಧಿನ್ ಕರಂದಾಡಿ ಸಿ.ಆರ್ ಪ್ರಾಪರ್ಟಿಸ್ ಮಾಲಕರಾದ ಸಂತೋಷ್ ಆಚಾರ್ಯ ಶಿರ್ವ, ಸುಹೈಲ್ ಕಾಪು ಸೈಫ್ ಕಾಪು ರಶೀದ್ ಕಾಪು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!