ಕುಂದಾಪುರ: ಲಾರಿ ಡಿಕ್ಕಿ- ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು
ಕುಂದಾಪುರ ಮೇ.4(ಉಡುಪಿ ಟೈಮ್ಸ್ ವರದಿ): ಲಾರಿ ಡಿಕ್ಕಿ ಹೊಡೆದು ಲಾರಿ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಲ್ಲೂರು ಸರ್ಕಲ್ ನಲ್ಲಿ ನಿನ್ನೆ ಸಂಜೆ ನಡೆದಿದೆ.
ಸಬ್ಲಾಡಿ ನಿವಾಸಿ ನೇತ್ರಾವತಿ ಮೊಗವೀರ (40) ಮೃತ ದುರ್ದೈವಿ. ಇವರು ಮೆಡಿಕಲ್ ನಿಂದ ಔಷಧಿ ತೆಗೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಅಲ್ಲದೆ ಡಿಕ್ಕಿ ಹೊಡೆದ ಲಾರಿ ನೇತ್ರಾವತಿ ಅವರನ್ನು ಸ್ಪಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದ್ದು. ಮಹಿಳೆ ದೇಹ ಛಿದ್ರವಾಗಿದೆ ಎನ್ನಲಾಗಿದೆ. ಅಪಘಾತ ನಡೆದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.