24 ಸೋಂಕಿತರು ಆಕ್ಸಿಜನ್‌‌‌ ಸಮಸ್ಯೆಯಿಂದಲೇ ಮೃತರಾಗಿದ್ದಾರೆ ಸರ್ಕಾರವೇ ಹೊಣೆ ಹೊರಬೇಕು: ಸಿ.ಟಿ.ರವಿ

ಬೆಂಗಳೂರು, ಮೇ.03,(ಉಡುಪಿ ಟೈಮ್ಸ್ ವರದಿ): ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿನ 24 ಕ್ಕೂ ಅಧಿಕ ಸೋಂಕಿತರು ಮೃತಪಟ್ಟ ಘಟನೆ ‘ಆಕ್ಸಿಜನ್‌‌‌ ಸಮಸ್ಯೆಯಿಂದಲೇ ಸಂಭವಿಸಿದ್ದರೆ ಸರ್ಕಾರವೇ ಹೊಣೆ ಹೊರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, “ಚಾಮರಾಜನಗರ ಕೊರೋನಾ ಆಸ್ಪತ್ರೆಯಲ್ಲಿ ಸಂಭವಿಸಿರುವ ಘಟನೆ ಕ್ಷಮೆಗೆ ಅರ್ಹವಲ್ಲ. ಈ ಘಟನೆ ಆಕ್ಸಿಜನ್‌‌‌ ಸಮಸ್ಯೆಯಿಂದ ನಡೆದಿದ್ದರೆ ಸರ್ಕಾರವೇ ಹೊಣೆ ಹೊರಬೇಕು” ಈ  ಘಟನೆಗೆ ಸಚಿವರೇ ಹೊಣೆ ಆಗಿದ್ದರೆ ಸಚಿವರೇ ಹೊಣೆ ಹೊರಬೇಕು. ಒಂದು ವೇಳೆ ನಾನು ಸಚಿವನಾಗಿ ಈ ರೀತಿಯ ಘಟನೆ ನನ್ನ ಗಮನಕ್ಕೆ ಬಂದು ಕ್ರಮ ಕೈಗೊಳ್ಳದಿದ್ದರೆ ನಾನೇ ಹೊಣೆ ಹೊರುತ್ತಿದ್ದೆ. ಈ ಘಟನೆಗೆ ಯಾರೇ ಹೊಣೆ ಅಗಿದ್ದರೂ ಕೂಡಾ ಕಠಿಣ ಕ್ರಮ ಕೈಗೊಳ್ಳಬೇಕು”  ಎಂದು ಮುಖ್ಯಮಂತ್ರಿ ಅವರಿಗೆ  ಮನವಿ ಮಾಡಿರುವುದಾಗಿ ತಿಳಿಸಿದರು.

ಈ ರೀತಿಯಾದ ಘಟನೆ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಎಚ್ಚರವಹಿಸುವಂತೆ ಒತ್ತಾಯಿಸುತ್ತೇನೆ” ಎಂದ ಅವರು, ತುರ್ತು ಆರೋಗ್ಯ ಪರಿಸ್ಥಿತಿಯ ಸಂದರ್ಭ ಅಗತ್ಯ ಆರೋಗ್ಯ ಸೇವೆ ವ್ಯವಸ್ಥೆ ಬಲಪಡಿಸಬೇಕು. ಸರ್ಕಾರಕ್ಕೆ  ಹಲವು ಸಲಹೆ ನೀಡಿದ್ದು, ಆ ಪೈಕಿ ಕೆಲವನ್ನು ಈಡೇರಿಸಿದ್ದಾರೆ. ಕೊರೋನಾ ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತಿರುವ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!