ಕಾರ್ಕಳ: ಚಿರತೆಗಳ ಕಾದಾಟ, ಏಳು ವರ್ಷದ ಚಿರತೆಯ ಸಾವು

ಕಾರ್ಕಳ: (ಉಡುಪಿ ಟೈಮ್ಸ್ ವರದಿ)ಇಲ್ಲಿನ ದುರ್ಗಾ ಗ್ರಾಮದ ಕಡಂಬಳ ಎಂಬಲ್ಲಿ ಎರಡು ಚಿರತೆಗಳ ಕಾದಾಟದಲ್ಲಿ ಹೆಣ್ಣು ಚಿರತೆಯೊಂದು ಮೃತ ಪಟ್ಟ ಘಟನೆ ಇಂದು ಬೆಳಕಿಗೆ ಬಂದಿದೆ.

ದುರ್ಗಾಮಲೆ ಮೀಸಲು ಅರಣ್ಯದಲ್ಲಿ ದೇಹದಲ್ಲಿ ಗಾಯಗೊಂಡು ಸ್ಥಿತಿಯಲ್ಲಿ ಸುಮಾರು ಆರರಿಂದ ಏಳು ವರ್ಷದ ಚಿರತೆ ಸತ್ತು ಬಿದ್ದಿತ್ತು, ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಕಾರ್ಕಳ ಭಾಗದಲ್ಲಿ ಹಲವಾರು ಚಿರತೆಗಳು ನಿವಾಸಿಗಳಿಗೆ ಕಾಣ ಸಿಗುತ್ತಿದ್ದು, ದಿನನಿತ್ಯ ಎಂಬಂತೆ ಅರಣ್ಯ ಇಲಾಖೆ ಸಿಬಂದಿಗಳು ಅವುಗಳನ್ನು ಸೆರೆ ಹಿಡಿಯಲು ಬೋನುಗಳನ್ನು ಇಡುತ್ತಿದ್ದಾರೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!