ಉಡುಪಿ: ಫೈನಾನ್ಸ್ ಹೆಸರಿನಲ್ಲಿ ಫೇಸ್ ಬುಕ್’ ನಲ್ಲಿ ವಂಚನೆ
ಉಡುಪಿ ಎ.30(ಉಡುಪಿ ಟೈಮ್ಸ್ ವರದಿ): ಅಪರಿಚಿತ ವ್ಯಕ್ತಿಯೊಬ್ಬರು ಬಜಾಜ್ ಫೈನಾನ್ಸ್ ಹೆಸರಿನಲ್ಲಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ವಂಚನೆಗೆ ಒಳಗಾದ ನೊವೆಲ್ ಲೋಬೋ ಅವರು ಪೊಲೀಸರಿಗೆ ದೂರು ನೀಡಿದ್ದು, ಅವರು ನೀಡಿರುವ ದೂರಿನ ಪ್ರಕಾರ, ಇವರಿಗೆ ಯಾರೋ ಅಪರಿಚಿತರು ಬಜಾಜ್ ಫೈನಾನ್ಸ್ ಎನ್ನುವ ಹೆಸರಿನಲ್ಲಿ ಫೇಸ್‌ಬುಕ್ ಮುಖಾಂತರ ಸಂಪರ್ಕಿಸಿ, ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ್ದರು.
ಆ ಮೂಲಕ ಸರ್ವಿಸ್ ಚಾರ್ಜ ರೂಪದಲ್ಲಿ ಮಾರ್ಚ್ 17 ರಂದು ಬಜಾಜ್ ಫೈನಾನ್ಸ್ ಎಂಬ ಹೆಸರಿನಲ್ಲಿ ಐಸಿಐಸಿಐ ಬ್ಯಾಂಕ್ ಖಾತೆಗೆ ರೂ.14,650 ವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ಮಾರ್ಚ್ 18 ರಂದು ಸ್ಟೇಟ್ ಬ್ಯಾಂಕ್ ಖಾತೆಗೆ ರೂ 2,500 ರೂ.ನ್ನು ಗೂಗಲ್ ಪೇ ಮುಖಾಂತರ ಒಟ್ಟು ರೂ.17,150 ನ್ನು ವರ್ಗಾವಣೆ ಮಾಡಿಸಿಕೊಂಡು ನೊವೆಲ್ ಲೋಬೋ ಅವರಿಗೆ ವಂಚಿಸಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.