ಉತ್ತರ ಪ್ರದೇಶ: ಆಕ್ಸಿಜನ್ ಇಲ್ಲದೆ ಒಂದೇ ದಿನ 70 ಮಂದಿ ಮೃತ್ಯು

ಅಲಿಗಢ ಎ.29: ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಇಲ್ಲದೆ ಒಂದೇ ದಿನ 70 ಮಂದಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಇದೀಗ ಭಾರೀ ಚರ್ಚೆ ನಡೆಯುತ್ತಿದೆ.

ಇತ್ತ ದೇಶದಲ್ಲಿ ಕೋವಿಡ್ ಸೋಂಕಿನ ವಾಸ್ತವ ವರದಿಯನ್ನು ಸರಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಪತ್ರಕರ್ತೆ ಎಂದೇ ಖ್ಯಾತಿ ಪಡೆದಿರುವ ರಾಣಾ ಅಯ್ಯೂಬ್ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಟ್ವೀಟ್ ನಲ್ಲಿ ರಾಣಾ ಅವರು ತನ್ನ ಪತ್ರಕರ್ತ ಮಿತ್ರರೊಬ್ಬರ ಮೂಲಕ ಪಡೆದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಪ್ರಕಾರ ಕೇವಲ ಅಲಿಗಢದಲ್ಲಿ ಮಾತ್ರ ಇಂದು ಬರೋಬ್ಬರಿ 70 ಜನರು ಆಕ್ಸಿಜನ್ ಇಲ್ಲದೆ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ನಡೆಸಿದ ಹತ್ಯಾ ಕಾಂಡವಾಗಿದೆ ಎಂದವರು ಟ್ವೀಟ್ ನಲ್ಲಿ ಬರೆದಿದ್ದಾರೆ.

ಈ ಟ್ವೀಟ್ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಗೆ ಯಾವುದೇ ಕೊರತೆಯಿಲ್ಲ ಎಂದಿದ್ದ ಮುಖ್ಯಮಂತ್ರಿ ಆದಿತ್ಯನಾಥ್‌ ಅವರ ಹೇಳಿಕೆಯ ಸತ್ಯಾಸತ್ಯತೆಯ ಕುರಿತೇ ಸಾರ್ವಜನಿಕರಿಗೆ ಇದೀಗ ಸಂಶಯ ಮೂಡಿದೆ. ಅದು ಮಾತ್ರವಲ್ಲ ಆಕ್ಸಿಜನ್ ಇಲ್ಲವೆಂದು ಹೇಳಿದವರ ವಿರುದ್ಧ ಕಠಿಣ ಕಾನೂನು ಕ್ರಮದ ಹಾಗೂ ಆಸ್ತಿ ವಶಪಡಿಸಿಕೊಳ್ಳುವ ಬೆದರಿಕೆಯನ್ನೂ ಒಡ್ಡಿದ್ದರು. ಉತ್ತರ ಪ್ರದೇಶದ ಚಿಂತಾಜನಕ ಪರಿಸ್ಥಿತಿ ಹೊರ ಜಗತ್ತಿಗೆ ತಿಳಿಯದಂತೆ ತಡೆಯುವುದು ಇದರ ಉದ್ದೇಶ ಎಂದು ಹಲವರು ಈ ಕ್ರಮವನ್ನು ಟೀಕಿಸಿದ್ದರು. ಇದೀಗ ರಾಣಾ ಅಯ್ಯೂಬ್ ಅವರ ಟ್ವೀಟ್ ಉತ್ತರ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನು ತಿಳಿಸಿದೆ ಎಂದೇ  ಹೇಳಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!