ಬ್ಯಾಂಕ್ ವಿಲೀನ ಕುರಿತು ಗ್ರಾಹಕ ತೃಪ್ತಿ ಸಮೀಕ್ಷೆ ನಡೆಸಲು ಆರ್‌ಬಿಐ ನಿರ್ಧಾರ

ಮುಂಬೈ: ಇತ್ತೀಚಿಗೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್ ಗಳ ವಿಲೀನವಾಗಿದ್ದು, ಇದರಿಂದ ಗ್ರಾಹಕರು ಪಡೆಯುತ್ತಿರುವ ಬ್ಯಾಂಕಿಂಗ್ ಸೇವೆಗಳ ಮೇಲೆ ಉಂಟಾಗುವ ಪರಿಣಾಮವನ್ನು ಕಂಡುಹಿಡಿಯಲು ಗ್ರಾಹಕ ತೃಪ್ತಿ ಸಮೀಕ್ಷೆ ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸಿದೆ.

ಗ್ರಾಹಕ ಸೇವೆಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಬ್ಯಾಂಕ್ ವಿಲೀನವು ಸಕಾರಾತ್ಮಕವಾಗಿದೆಯೇ ಎಂಬುದರ ಬಗ್ಗೆ ಗ್ರಾಹಕರ ಪ್ರತಿಕ್ರಿಯೆ ಪಡೆಯಲು ಮುಂದಾಗಿದೆ.

ಗ್ರಾಹಕರಿಗೆ ಕೆಲವು ಆಯ್ಕೆಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಒಂದನ್ನು ಟಿಕ್ ಮಾಡಬೇಕು – ಬಲವಾಗಿ ಒಪ್ಪುತ್ತೇನೆ; ಒಪ್ಪುತ್ತೇನೆ; ತಟಸ್ಥ; ಒಪ್ಪುವುದಿಲ್ಲ; ಅಥವಾ ಬಲವಾಗಿ ಒಪ್ಪುವುದಿಲ್ಲ.

ಪ್ರಸ್ತಾವಿತ ಸಮೀಕ್ಷೆಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಮತ್ತು ಗುಜರಾತ್ ಸೇರಿದಂತೆ 21 ರಾಜ್ಯಗಳಿಂದ ಒಟ್ಟು 20,000 ಗ್ರಾಹಕರ ಅಭಿಪ್ರಾಯ ಪಡೆಯಲಾಗುತ್ತಿದೆ.

2019-20ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಯಿತು; ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನೊಂದಿಗೆ; ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿಕೇಟ್ ಬ್ಯಾಂಕ್; ಇಂಡಿಯನ್ ಬ್ಯಾಂಕ್‌ನೊಂದಿಗೆ ಅಲಹಾಬಾದ್ ಬ್ಯಾಂಕ್; ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!