ಉದ್ಯಾವರ: ಬಟ್ಟೆಮಳಿಗೆ ಬಂದ್ ಇದ್ದರೂ ಸಿಬ್ಬಂದಿಗೆ ಹಲ್ಲೆಗೈದ ಪೊಲೀಸ್ ಕಾನ್‌ಸ್ಟೇಬಲ್
ಉದ್ಯಾವರ: (ಉಡುಪಿ ಟೈಮ್ಸ್ ವರದಿ) ಇಲ್ಲಿನ ಹೆಸರಾಂತ ಜಯಲಕ್ಷ್ಮೀ ಸಿಲ್ಕ್ಸ್& ಟೆಕ್ಸ್‌ಟೈಲ್ಸ್ ಜವಳಿ ಮಳಿಗೆ ಸರಕಾರ ಕೋವಿಡ್ ನಿಯಮಾನುಸಾರ ಮುಚ್ಚಿದ್ದರೂ ಕಾಪು ಪೊಲೀಸ್ ಪೇದೆಯೋರ್ವ ಮಳಿಗೆಯ ವಾಹನದ ಚಾಲಕನೊರ್ವನಿಗೆ ವಿನಹ: ಕಾರಣ ಹಲ್ಲೆಗೈದಿದ್ದ ಘಟನೆ ನಡೆದಿದೆ.
ಸರಕಾರದ ನಿಯಮದಂತೆ ಶುಕ್ರವಾರ ಸಂಜೆಯಿಂದ ಮಳಿಗೆ ಬಂದ್ ಮಾಡಿದ್ದು, ಇಂದು ವೀಕೆಂಡ್ ಕರ್ಫ್ಯೂ ಮುಗಿದಿದ್ದ ಕಾರಣ ಬೆರಳೆಣಿಕೆಯ ಸಿಬ್ಬಂದಿಗಳು ಸರಿಯಾದ ಮಾಹಿತಿ ಇಲ್ಲದೆ ಕೆಲಸಕ್ಕೆಂದು ಮಳಿಗೆಗೆ ಬಂದಿದ್ದರು.
ಇದರ ಮಾಹಿತಿ ಪಡೆದ ಕಾಪು ಪೊಲೀಸ್ ಠಾಣೆ ಪೇದೆ ಜವಳಿ ಅಂಗಡಿ ತೆರೆದಿದೆಂದು ತಿಳಿದು ಅಂಗಡಿ ಮಾಲಕರಿಂದ ಹಣ ವಸೂಲು ಮಾಡುವ ಉದ್ದೇಶದಿಂದಲೇ ಮಳಿಗೆಯ ಹಿಂಬದಿ ಪರಿಶೀಲಿಸಿದ್ದ ಎನ್ನಲಾಗಿದೆ.
ಅಲ್ಲಿ ನೋಡಿದಾಗ ಮಳಿಗೆ ಬಂದ್ ಇರುವುದು ತಿಳಿದು ಸಿಬ್ಬಂದಿಗಳನ್ನು ವಿನಹ: ಕಾರಣ ನಿಂದಿಸಲು ಪ್ರಾರಂಭಿಸಿದ್ದ, ಅದೇ ಸಮಯದಲ್ಲಿ ಮಳಿಗೆಯ ವಾಹನ ಚಾಲಕ ಇಸ್ತ್ರಿಗೆ ನೀಡಿರುವ ಮಾಲಕರ ಬಟ್ಟೆಗಳನ್ನು ಹಿಡಿದುಕೊಂಡು ಬರುತ್ತಿದ್ದನ್ನು ನೋಡಿ ಅವರನ್ನು ಕೂಡ ನಿಂದಿಸಲು ಪಾರಂಭಸಿದ ಮಾತ್ರವಲ್ಲದೆ, ಪೇದೆಯು ಇದು ಖರೀದಿಸಿದ ಬಿಲ್ ಎಲ್ಲಿ ಎಂದು ಪ್ರಶ್ನಿಸಲು ತೊಡಗಿದ. ಆಗ ಕಾರು ಚಾಲಕ ಇದು ಮಾಲಕರ ಬಟ್ಟೆ ಎಂದರೂ ಬೀಡದ ಪೇದೆ ಮತ್ತೆ ಸಿಬ್ಬಂದಿಗಳನ್ನು ನಿಂದಿಸಿದ್ದ.
ಕೇವಲ ಜವಳಿ ಮಳಿಗೆಯಿಂದ ಹಣ ವಸೂಲು ಮಾಡುವ ಉದ್ದೇಶದಿಂದಲೇ ಕಾಪು ಠಾಣೆಯ ಕಾನ್‌ಸ್ಟೇಬಲ್ ಈ ರೀತಿ ಮಳಿಗೆಯ ಸುತ್ತಲು ಗಿರಕಿ ಹೊಡೆಯುತ್ತ ಇರುತ್ತಾನೆಂದು ಸ್ಥಳೀಯರು ದೂರಿದ್ದಾರೆ.
ಈತನ ವರ್ತನೆ ಬಗ್ಗೆ ಜಯಲಕ್ಷ್ಮೀ ಸಿಲ್ಕ್ಸ್ ನ ಮಾಲಕರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.