ಕಡಿಮೆ ಪ್ರಯಾಣಿಕರು: ಏ.28 ರಿಂದ ಜೂ.1 ವರೆಗೆ ಈ 10 ರೈಲುಗಳು ರದ್ದು

ಸಿಕಂದರಾಬಾದ್: ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿರುವ ಪರಿಣಾಮ, ದಕ್ಷಿಣ ಕೇಂದ್ರೀಯ ರೈಲ್ವೆಯ (ಎಸ್ ಸಿಆರ್) ಏ.28 ರಿಂದ ಜೂ.1 ರವರೆಗೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. 

ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ, ಮತ್ತೆ ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. 

ಎಸ್ ಸಿಆರ್ ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಹೇಳಿದೆ. 

ವಿವರಗಳು ಹೀಗಿವೆ

ನರ್ಸಾಪುರ್- ನಿಡದವೊಲು (07241)
ನಿಡದವೊಲು-ನರಸಪುರ್ (07242)
ಸಿಕಂದರಾಬಾದ್-ಬೀದರ್ (07010)
ಬೀದರ್-ಹೈದರಾಬಾದ್ (07009)
ಸಿಕಂದರಾಬಾದ್-ಕರ್ನೂಲು ಸಿಟಿ(07027)
ಕರ್ನೂನು ನಗರ-ಸಿಕಂದರಾಬಾದ್ (07028)
ಮೈಸೂರು-ರೇನಿಗುಂಟ(01065)
ರೇನಿಗುಂಟ-ಮೈಸೂರು(01066)
ಸಿಕಂದರಾಬಾದ್-ಮುಂಬೈ ಎಲ್ ಟಿಟಿ(02235)
ಮುಂಬೈ ಎಲ್ ಟಿಟಿ-ಸಿಕಂದರಾಬಾದ್ (02236)

Leave a Reply

Your email address will not be published. Required fields are marked *

error: Content is protected !!