ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ ಏ.27 ರಿಂದ ಹದಿನಾಲ್ಕು ದಿನ ಲಾಕ್ ಡೌನ್!

ಉಡುಪಿ ಎ.26 (ಉಡುಪಿ ಟೈಮ್ಸ್ ವರದಿ) ರಾಜ್ಯದಲ್ಲಿ ಮಿತಿ ಮೀರಿ ಕೋವಿಡ್ ಸೊಂಕು ಹರಡುತ್ತಿದೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್‍ನ್ನು ಜಾರಿ ಮಾಡಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ 14 ದಿನಗಳಲ್ಲಿ ಕೋವಿಡ್ ಸೋಂಕು ಹತೋಟಿಗೆ ಬರದಿದ್ರೆ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರೆಸಲಾಗುತ್ತದೆ ಎಂದು ತಿಳಿಸಲಾಗಿದೆ. 

ನಾಳೆ ರಾತ್ರಿಯಿಂದ ರಾಜ್ಯದಲ್ಲಿ 14 ದಿನಗಳ ಕಾಲ ಬಿಗಿಯಾದ ಕ್ರಮಗಳು ಜಾರಿಯಲ್ಲಿರಲಿದೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 14 ದಿನಗಳು ಸಾರಿಗೆ ಸಂಚಾರ ಸ್ಥಬ್ಧವಾಗಲಿದ್ದು, ಬಸ್, ಆಟೋ, ಕ್ಯಾಬ್‍ಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಗೂಡ್ಸ್ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉತ್ಪಾದನಾ ವಲಯ ಎಂದಿನಂತೆ ಮುಂದುವರೆಲಿದ್ದು, ಕಟ್ಟಡ ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಗಾರ್ಮೆಂಟ್ಸ್ ಹೊರತು ಪಡಿಸಿ ಕೈಗಾರಿಕೆಗಳಿಗೆ ವಿನಾಯಿತಿ ನೀಡಿದೆ. ಹೊರ ರಾಜ್ಯಕ್ಕೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ.

ಸರ್ಕಾರಿ ಆಸ್ಪತ್ರೆಯಲ್ಲಿ 18 ರಿಂದ 45 ವಯಸ್ಸಿನೊಳಗಿರುವವರಿಗೆ ಲಸಿಕೆಯನ್ನು ಉಚಿತವಾಗಿ ಪೂರೈಕೆ ನೀಡಲಾಗುವುದು.

ರಾಜ್ಯದಲ್ಲಿ ಎಂದಿನಂತೆ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯರೆಗೂ ಕರ್ಫ್ಯೂ ಮುಂದುವರೆಯಲಿದೆ. ಗಾರ್ಮೆಂಟ್ಸ್ ನೌಕರರನ್ನು ಹೊರತುಪಡಿಸಿ, ಉತ್ಪಾದನಾ, ಕ್ಷೇತ್ರ, ಕೃಷಿ, ಕಟ್ಟಡ, ವೈದ್ಯಕೀಯ ಚಟುವಟಿಕೆಗಳು ಮುಂದುವರೆಯುತ್ತದೆ. 

ತಾಲೂಕು ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಆಕ್ಸಿಜನ್ 800 ಮೆಟ್ರಿಕ್ ಟನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಸರಕು- ಸಾಗಾಣಿಕೆ ವಾಹನಗಳಿಗೆ ಮಾತ್ರ ಈ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

 ಬಾರ್ ಓಪನ್ ಇರಲಿದ್ದು ಕೇವಲ ಪಾರ್ಸೆಲ್ ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗಳನ್ನು ಮುಂದೂಡಲು ಶಿಫಾರಸ್ಸು ಮಾಡಲಾಗಿದೆ.

1 thought on “ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ ಏ.27 ರಿಂದ ಹದಿನಾಲ್ಕು ದಿನ ಲಾಕ್ ಡೌನ್!

Leave a Reply

Your email address will not be published. Required fields are marked *

error: Content is protected !!